ಆ್ಯಪ್ನಗರ

ಉಕ ಭಾಗದಲ್ಲಿಕೈಗಾರಿಕೆ ಅಭಿವೃದ್ಧಿಗೆ ಕ್ರಮ

ಬೆಳಗಾವಿ: ''ಉತ್ತರ ಕರ್ನಾಟಕ ...

Vijaya Karnataka 2 Oct 2019, 5:00 am
ಬೆಳಗಾವಿ: ''ಉತ್ತರ ಕರ್ನಾಟಕ ಭಾಗದಲ್ಲಿಕೈಗಾರಿಕೆಗಳನ್ನು ಬೆಳೆಸಲು ಹಾಗೂ ಅವುಗಳಿಗೆ ಮೂಲಸೌಕರ್ಯ ಒದಗಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿತೀರ್ಮಾನಿಸಲಾಗುವುದು'', ಎಂದು ಜಿಲ್ಲಾಉಸ್ತುವಾರಿ ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದರು.
Vijaya Karnataka Web 1RAJU-1064939


ಇಲ್ಲಿನ ಉದ್ಯಮಬಾಗ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯಗಳ ಕೊರತೆಗಳನ್ನು ಪರಿಶೀಲಿಸಿದ ಅವರು, ನಂತರ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿಕೈಗಾರಿಕೋದ್ಯಮಿಗಳನ್ನುದ್ದೇಶಿಸಿ ಮಾತನಾಡಿದರು. ''ಉದ್ಯಮಬಾಗ ಪ್ರದೇಶ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ರಸ್ತೆಗಳು ಹಾಳಾಗಿವೆ. ಇಂದಿನ ಭೇಟಿಯಲ್ಲಿನನಗೆ ಪೂರ್ಣ ಮನವರಿಕೆಯಾಗಿದೆ. ಸುಧಾರಣೆ ಮತ್ತು ಸೌಕರ್ಯ ಕಲ್ಪಿಸಲು ಶೀಘ್ರ ಕ್ರಮ ಜರುಗಿಸಲಾಗುವುದು'', ಎಂದು ತಿಳಿಸಿದರು. ಸಭೆಯಲ್ಲೇ ಪಾಲಿಕೆ ಆಯುಕ್ತರಿಂದ ಕೆಲ ಮಾಹಿತಿ ಪಡೆದುಕೊಂಡರು.

''ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ ಒಳಗೊಂಡು ಇತರೆ ಕಡೆಗೆ ಕೈಗಾರಿಕೆಗಳು ಬೆಳೆಯುತ್ತಿವೆ. ಇವುಗಳಿಗೆ ಕೇಂದ್ರ, ರಾಜ್ಯಗಳಿಂದ ಏನು ಸಿಗಬೇಕೋ ಅದನ್ನೆಲ್ಲಕೊಡಿಸಲಾಗುವುದು. ಆಯಾ ಜಿಲ್ಲಾಧಿಕಾರಿಗಳು ಸಕಾಲಕ್ಕೆ ಸಭೆಗಳನ್ನು ಮಾಡಿ ಕೈಗಾರಿಕೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಬೇಕು. ನಿಮ್ಮ ಪ್ರಸ್ತಾವಗಳು ರಾಜ್ಯದಿಂದ ಕೇಂದ್ರಕ್ಕೆ ಹೋಗುವುದಿದ್ದರೆ ಕಳುಹಿಸಿಕೊಡುತ್ತೇನೆ'', ಎಂದರು.

''ಶಾಸಕ ಅಭಯ ಪಾಟೀಲ ರೂಪಿಸಿರುವ 6 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಯನ್ನು ಉದ್ಯಮಬಾಗದಲ್ಲಿಬೇಗನೇ ಅನುಷ್ಠಾನ ಮಾಡಲಾಗುವುದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಸರಕಾರದ ವತಿಯಿಂದ ಅಗತ್ಯ ನೆರವು ಕೊಡಲಾಗುವುದು'', ಎಂದು ಶೆಟ್ಟರ್‌ ಹೇಳಿದರು.

ಶಾಸಕ ಅಭಯ್‌ ಪಾಟೀಲ ಮಾತನಾಡಿ, ''ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿಅತಿ ಹೆಚ್ಚಿನ ತೆರಿಗೆಯನ್ನು ಬೆಳಗಾವಿ ಪ್ರದೇಶ ನೀಡುತ್ತದೆ. ಹೀಗಾಗಿ ಸರಕಾರಗಳು ಇಲ್ಲಿಮೂಲಸೌಕರ್ಯಗಳ ಸೃಷ್ಟಿಗೆ ಹೆಚ್ಚಿನ ಒತ್ತು ಕೊಡಬೇಕು'' ಎಂದರು. ಕೈಗಾರಿಕೋದ್ಯಮಿಗಳು ಬೆಳಗಾವಿ ಕೈಗಾರಿಕಾ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಮನವಿ ಪತ್ರ ನೀಡಿದರು.

ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಜಗದೀಶ್‌ ಕೆ.ಎಚ್‌., ಜಿಲ್ಲಾಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕ ದೊಡ್ಡಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು. ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀಧರ್‌ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್‌ ಸಬನೀಸ್‌ ವಂದಿಸಿದರು.

ಶೀಘ್ರ ಹೊಸ ಕೈಗಾರಿಕೆ ನೀತಿ:
''ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿರಾಜ್ಯದಲ್ಲಿಹೊಸ ಕೈಗಾರಿಕೆ ನೀತಿ ಜಾರಿಗೊಳ್ಳುತ್ತದೆ. ಇದಕ್ಕಾಗಿ ಈಗ ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ ಒಳಗೊಂಡು ಇತರೆ ರಾಜ್ಯಗಳ ಕೈಗಾರಿಕೆ ನೀತಿಗಳ ಅಧ್ಯಯನ ನಡೆದಿದೆ. ಇಲ್ಲಿನ ಉತ್ತಮ ಅಂಶವೂ ಒಳಗೊಂಡಂತೆ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡುವ ಮಾದರಿ ಕೈಗಾರಿಕೆ ನೀತಿ ಕರ್ನಾಟಕದ್ದು ಆಗಿರುತ್ತದೆ'' ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಹೊಸತನಕ್ಕೆ ಒತ್ತು ನೀಡಿ:
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ''ಸರಕಾರಗಳ ನಿರ್ಲಕ್ಷ್ಯ ಮತ್ತು ನಿಮ್ಮಲ್ಲಿಒಗ್ಗಟ್ಟು ಇಲ್ಲದಿರುವುದು ಉದ್ಯಮ ಕ್ಷೇತ್ರ ಮೂಲಸೌಕರ್ಯ ವಂಚಿತವಾಗಲು ಕಾರಣವಾಗಿದೆ. ಉದ್ಯಮಿಗಳು ಹೊಸದರ ಕಡೆಗೆ ಒತ್ತು ಕೊಡಬೇಕು. ನಿಮ್ಮ ಅಗತ್ಯಗಳ ಬಗ್ಗೆ ಸರಕಾರದ ಗಮನ ಸೆಳೆದು ಕೊಡಿಸಲಾಗುವುದು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ