ಆ್ಯಪ್ನಗರ

ತಂಬಾಕು ಉತ್ಪನ್ನಗಳ ಎಗ್ಗಿಲ್ಲದ ಮಾರಾಟ ನಿಲ್ಲಲಿ

ಚಿಕ್ಕೋಡಿ: ತಂಬಾಕು ಸೇವನೆಯಿಂದ ಪ್ರತಿ ವರ್ಷ ಸುಮಾರು 60 ಲಕ್ಷ ಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿರುವುದು ಆಘಾತಕಾರಿ ಎಂದು ಜಿಲ್ಲಾ 7ನೇ ಹೆಚ್ಚುವರಿ ಜಿಲ್ಲಾ ...

Vijaya Karnataka 2 Jun 2019, 5:00 am
ಚಿಕ್ಕೋಡಿ : ತಂಬಾಕು ಸೇವನೆಯಿಂದ ಪ್ರತಿ ವರ್ಷ ಸುಮಾರು 60 ಲಕ್ಷ ಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿರುವುದು ಆಘಾತಕಾರಿ ಎಂದು ಜಿಲ್ಲಾ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶÜ ಮಹಾಂತಪ್ಪಾ ಎ.ಡಿ. ವಿಷಾದ ವ್ಯಕ್ತಪಡಿಸಿದರು.
Vijaya Karnataka Web BEL-1CKD1


ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷ ಣ ಇಲಾಖೆ, ಕಂದಾಯ ಹಾಗೂ ಪೊಲೀಸ್‌ ಇಲಾಖೆಗಳ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಂಬಾಕು ಉತ್ಪನ್ನಗಳಾದ ಗುಡಕಾ, ಸಿಗರೇಟ್‌ಗಳ ಎಗ್ಗಿಲ್ಲದ ಮಾರಾಟವನ್ನು ಸರಕಾರ ತಡೆಯಬೇಕು. ತಂಬಾಕು ಬೆಳೆಯಲು ಅನುಮತಿ ನೀಡದೆ ದೇಶವನ್ನು ತಂಬಾಕು ಮುಕ್ತಗೊಳಿಸಲು ಪ್ರಯತ್ನ ನಡೆಸಬೇಕು. ಜತೆಗೆ ತಂಬಾಕು ಹಾಗೂ ಅದರ ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಅಭಿಯಾನ ಹಮ್ಮಿಕೊಳ್ಳಬೇಕು.

ತಂಬಾಕು ತಡೆ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಪಟ್ಟ ಘೋಷನೆಗಳೊಂದಿಗೆ ಸಾರ್ವಜನಿಕ ಆಸ್ಪತ್ರೆಯಿಂದ ಹೊರಟ ಜಾಥಾ ಕೆ.ಸಿ. ರಸ್ತೆ ಮೂಲಕ ಬಸವಸರ್ಕಲ್‌ ತಲುಪಿ ಬಳಿಕ ತಹಸೀಲ್ದಾರ್‌ ಕಚೇರಿ ಬಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಹಿರಿಯ ನ್ಯಾಯಾಧಿಶ ಎಸ್‌.ಎಲ್‌. ಚವ್ಹಾಣ, ವಿಜಯಕುಮಾರ ಬಾಗಡಿ, ಚಿಕ್ಕೊಡಿ ಸಿಪಿಐ ಬಸವರಾಜ ಮುಕರ್ತಿಹಾಳ, ಸಂಚಾರಿ ಪಿಎಸ್‌ಐ ಶಿವರಾಜ ದರಿಗೊಂಡ, ಪಿಎಸ್‌ಐ ಎಸ್‌.ಬಿ. ಪಾಟೀಲ, ಡಾ. ಎಸ್‌.ಎಸ್‌. ಗಡೇದ್‌, ಡಾ. ವಿವೇಕ ಹೊನ್ನಳ್ಳಿ, ಡಾ. ಲಕ್ಷ್ಮೀಕಾಂತ ಕಡ್ಲೆಪ್ಪಗೋಳ, ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ತಾಲೂಕು ವೈದ್ಯಾಧಿಕಾರಿ ವಿ.ವಿ. ಶಿಂದೆ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ