ಆ್ಯಪ್ನಗರ

ಶಾಂತಿ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ

ಹಣ್ಣಿಕೇರಿ: ಗ್ರಾಮದಲ್ಲಿ ಕಾನೂನು ಬಾಹಿರ ಕೃತ್ಯ ಎಸಗಿ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ನೇಸರಗಿ ಪೊಲೀಸ್‌ ಠಾಣಾ ...

Vijaya Karnataka 12 Apr 2019, 5:00 am
ಹಣ್ಣಿಕೇರಿ : ಗ್ರಾಮದಲ್ಲಿ ಕಾನೂನು ಬಾಹಿರ ಕೃತ್ಯ ಎಸಗಿ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ನೇಸರಗಿ ಪೊಲೀಸ್‌ ಠಾಣಾ ಪಿಎಸ್‌ಐ ಆರ್‌.ಎಸ್‌. ಜಾನರ್‌ ಎಚ್ಚರಿಸಿದರು.
Vijaya Karnataka Web BEL-11 HANNIKERI 1


ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರೆಯ ನಿಮಿತ್ತ ನಡೆದ ಪೂರ್ವಭಾವಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆ, ಹಬ್ಬಗಳು ಸಾಮರಸ್ಯದ ಸಂಕೇತಗಳಾಗಿವೆ. ಅಂಥಹ ಸಂದರ್ಭದಲ್ಲಿ ದುಷ್ಕರ್ಮಿಗಳು ಸಾಮರಸ್ಯ ಕದಡಲು ಯತ್ನಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಶಾಂತಿ ಕಾಪಾಡುವಲ್ಲಿ ಗ್ರಾಮಸ್ಥರೂ ಸಹಕಾರ ನೀಡಬೇಕೆಂದರು.

ಅಧ್ಯಕ್ಷ ತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಜಗದೀಶ ಪಾಟೀಲ, ಜಾತ್ರೆಯು ಸುರಕ್ಷಿತ ಹಾಗೂ ಶಾಂತತೆಯಿಂದ ನಡೆಯಲು ಎಲ್ಲರೂ ಶ್ರಮಿಸಬೇಕು. ಗ್ರಾಮದಲ್ಲಿ ಮದ್ಯ ಮಾರಾಟ, ಗಾಂಜಾ ಮಾರಾಟ ನಿಷೇಧವಾಗಬೇಕು. ಕಾನೂನು ಮೀರಿ ಯಾರೂ ವರ್ತಿಸಬಾರದು ಎಂದು ಹೇಳಿದರು.

ಆನಂದ ಮುನೆಣ್ಣಿ, ಶಿವಬಸಪ್ಪ ವಾರಿ, ಪಾಂಡಪ್ಪ ಶಿಲೇದಾರ, ಬಸಪ್ಪ ಭಾಂವಿ, ಯುವಕ ಸಂಘಗಳ ಸದಸ್ಯರು ಸೇರಿದಂತೆ ಅನೇಕರು ಇದ್ದರು. ದೇಮಪ್ಪ ಬಳಗಣ್ಣವರ ನಿರೂಪಿಸಿ, ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ