ಆ್ಯಪ್ನಗರ

ಚಿಕ್ಕೋಡಿ ತಾಪಂ ಸಭೆಯಲ್ಲಿ ಸದಸ್ಯರ ದಿಢೀರ್‌ ಪ್ರತಿಭಟನೆ

ಚಿಕ್ಕೋಡಿ: ಕೃಷ್ಣಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ...

Vijaya Karnataka 17 Jan 2020, 5:00 am
ಚಿಕ್ಕೋಡಿ: ಕೃಷ್ಣಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ಸರ್ವೇ ಕಾರ್ಯ ಮಾಡದಿರುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಸರಕಾರದ ಪರಿಹಾರ ನೀಡದಿರುವುದನ್ನು ಖಂಡಿಸಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಸದಸ್ಯರು ಗುರುವಾರ ಧರಣಿ ಕುಳಿತು ದಿಢೀರನೆ ಪ್ರತಿಭಟನೆ ನಡೆಸಿದರು.
Vijaya Karnataka Web 16CKD1_53
ಕ್ಕೋಡಿಯಲ್ಲಿಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿತಾಪಂ ಸದಸ್ಯರು ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಪರಿಹಾರ ವಿತರಣೆ ಹಾಗೂ ಮನೆಗಳ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ತಾಪಂ ಸದಸ್ಯರು ಧರಣಿ ನಡೆಸಿ ಪ್ರತಿಭಟಿಸಿದರು.


ಗ್ರೇಡ್‌-2 ತಹಸೀಲ್ದಾರ್‌ ದಿಲ್‌ವಾರ್‌ಖಾನ್‌ ಜಮಾದಾರ ಹಾಗೂ ಉಪತಹಸೀಲ್ದಾರ್‌ ಸಿ.ಎ.ಪಾಟೀಲ ಅವರನ್ನು ಸದಸ್ಯರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಪ್ರವಾಹ ಪೀಡಿತ ಗ್ರಾಮದಲ್ಲಿಹಲವಾರು ಜನ ಮನೆ ಕಳೆದುಕೊಂಡು ಆರು ತಿಂಗಳು ಗತಿಸಿದರೂ ಈವರೆಗೆ ಸರ್ವೇ ಕಾರ್ಯ ಸರಿಯಾಗಿ ಮಾಡಿಲ್ಲ. ಹಲವಾರು ಜನರಿಗೆ ಸರಕಾರದ ನಿಯಮಾವಳಿ ಪ್ರಕಾರ ಪರಿಹಾರ ನೀಡುವಲ್ಲಿಅಧಿಕಾರಿಗಳು ನಿರ್ಲಕ್ಷತ್ರ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕಳೆದ ಸಾಮಾನ್ಯ ಸಭೆಯಲ್ಲಿಮುಳುಗಡೆ ಪ್ರದೇಶದಲ್ಲಿನ ಗ್ರಾಮಗಳಲ್ಲಿಸರಿಯಾಗಿ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಅಂದಿನ ತಾಪಂ ಸಾಮಾನ್ಯ ಸಭೆಯಲ್ಲಿಠರಾವು ಪಾಸು ಮಾಡಲಾಗಿತ್ತು. ಇಲ್ಲಿವರೆಗೆ ಸರಿಯಾಗಿ ಪರಿಹಾರ ನೀಡಿಲ್ಲವೇಕೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಎಲ್ಲಸದಸ್ಯರು ಪಕ್ಷಬೇಧ ಮರೆತು ಪ್ರತಿಭಟನೆ ನಡೆಸಿದರು. ಪರಿಹಾರ ಸಮಸ್ಯೆ ಬಗೆಹರಿಸುವಲ್ಲಿವಿಫಲವಾಗಿರುವುದರಿಂದ ಎಲ್ಲಾತಾಪಂ ಸದಸ್ಯರನ್ನು ಜಿಲ್ಲಾಧಿಕಾರಿಗಳ ಬಳಿ ಕರೆದುಕೊಂಡು ಹೋಗುವಂತೆ ಬಿಗಿಪಟ್ಟು ಹಿಡಿದರು.

ಮಧ್ಯಾಹ್ನ ಊಟದ ಸಮಯವಾದರೂ ಪ್ರತಿಭಟನೆ ಹಿಂಪಡೆಯಲಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದರೂ ಫಲ ನೀಡಿಲಿಲ್ಲ. ಅತಿವೃಷ್ಟಿಯಿಂದ ಹಾನಿಯಾದ ಚಿಕ್ಕೋಡಿ ತಾಲೂಕಿನ ಎಲ್ಲಾಗ್ರಾಮಗಳ ಜನರ ಸಮಸ್ಯೆ ಬಗೆಹರಿಸುವವರೆಗೆ ಹಿಂಪಡೆಯುವುದಿಲ್ಲಎಂದು ಖಡಕ್ಕಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಲ್ಲೋಳ ತಾಪಂ ಸದಸ್ಯ ರವಿ ಮಿರ್ಜಿ, ರಾಜು ಪಾಟೀಲ, ಕಾಶಿನಾಥ ಕುರಣಿ ಮುಂತಾದವರು ಮುಂಚೂಣಿಯಲ್ಲಿದ್ದರು.

ತಾಪಂ ಅಧ್ಯಕ್ಷೆ ಉರ್ಮಿಳಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾದೇವಿ ನಾಯಿಕ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಪಾಟೀಲ, ಶಿವಾನಂದ ಶಿರಗಾಂವೆ, ಜಿ.ಎಂ.ಸ್ವಾಮಿ, ಟಿಎಚ್‌ಒ ಡಾ. ವಿಠ್ಠಲ ಶಿಂಧೆ, ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಪಂ ಸಾಮಾನ್ಯ ಸಭೆಯಲ್ಲಿಹಲವು ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದಿರುವುದಕ್ಕೆ ತಾಪಂ ಸದಸ್ಯರು ಸಭೆಯಲ್ಲಿತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಬಾರದೆ ಇರುವ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಅಧ್ಯಕ್ಷೆ ಉರ್ಮಿಳಾ ಪಾಟೀಲ ಸೂಚಿಸಿದರು. ಅಧಿಕಾರಿಗಳ ಬರುವಿಕೆಗಾಗಿ ಕೆಲ ಹೊತ್ತು ಸಭೆಯಲ್ಲಿಭಾಗವಹಿಸಿದವರು ಕಾಯುತ್ತಿರುವುದು ಕಂಡು ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ