ಆ್ಯಪ್ನಗರ

ಮನೆ ಮನೆಗೆ ತೆರಳಿ ಶಾಲಾ ಮಕ್ಕಳಿಂದ ಅಕ್ಕಿ ಸಂಗ್ರಹ

ಬೈಲಹೊಂಗಲ :ಸಮಾಜಕ್ಕೆ ನಮ್ಮ ಕೈಲಾದಷ್ಟು ಸೇವೆ ಮಾಡೋಣ...

Vijaya Karnataka 20 Jan 2019, 5:00 am
ಬೈಲಹೊಂಗಲ : ಸಮಾಜಕ್ಕೆ ನಮ್ಮ ಕೈಲಾದಷ್ಟು ಸೇವೆ ಮಾಡೋಣ. ಪ್ರತಿ ಮನೆಯಿಂದಲೂ ಕೇವಲ ಒಂದೇ ಮುಷ್ಟಿ ಅಕ್ಕಿ ಸಿಕ್ಕರೂ ಅದನ್ನು ಸಂತೋಷದಿಂದ ಸ್ವೀಕರಿಸಿ ಎಂದು ವಿದ್ಯಾರ್ಥಿಗಳಿಗೆ ಕಲ್ಪವೃಕ್ಷ ಶಾಲೆಯ ಪ್ರಾಚಾರ್ಯ ಅರಿಂದಂ ರಾಯ್‌ ಚೌಧರಿ ಹೇಳಿದರು.
Vijaya Karnataka Web BEL-19HTP4


ಇಲ್ಲಿಯ ಮುರಗೋಡ ರಸ್ತೆಯ ಕಲ್ಪವೃಕ್ಷ ಶಾಲೆಯಲ್ಲಿ ಶನಿವಾರ ನಡೆದ ಅನ್ನಪೂರ್ಣಾ ಕಾರ್ಯಕ್ರಮ ನಿಮಿತ್ತ ಧಾನ್ಯ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಪಪ್ರಾಚಾರ್ಯೆ ಸುಶ್ಮಿತಾ ರಾಯ್‌ ಚೌಧರಿ ವಿದ್ಯಾರ್ಥಿಗಳಿಗೆ ಈ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು.

4ರಿಂದ 9ನೇ ತರಗತಿಯ ಮಕ್ಕಳು ಬೈಲಹೊಂಗಲ ಪಟ್ಟಣದ ಹತ್ತು ಬಡಾವಣೆಗಳಿಗೆ ಹಾಗೂ ಮುನವಳ್ಳಿ, ತಲ್ಲೂರು, ಮುರಗೋಡ, ಹೊಸೂರ, ವಕ್ಕುಂದ, ಅನಿಗೋಳ, ನೇಗಿನಹಾಳ, ಬೆಳವಡಿ, ನೇಸರಗಿ, ತಿಗಡಿ ಊರುಗಳಿಗೆ ವಿವಿಧ ಗುಂಪುಗಳಲ್ಲಿ ತೆರಳಿ, ಶಿಕ್ಷ ಕರ ಮಾರ್ಗದರ್ಶನದಲ್ಲಿ ಮನೆ ಮನೆಗಳಿಂದ ಅಕ್ಕಿಯನ್ನು ಸಂಗ್ರಹಿಸಿದರು. ಈ ಕಾರ್ಯಕ್ರಮಕ್ಕೆ ನಾಗರಿಕರ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಿಶೇಷವಾಗಿತ್ತು.

ಹೀಗೆ ವಿವಿಧ ಊರುಗಳಿಂದ 30 ಕ್ವಿಂಟಾಲ್‌ ಅಕ್ಕಿ ಸಂಗ್ರಹವಾಗಿದೆ. ಈ ಅಕ್ಕಿಯನ್ನು ಜ. 23ನೇ ತಾರೀಖು, ಸೇವಾ ಸಂಸ್ಥೆಗಳಾದ ಬೈಲಹೊಂಗಲದ ಕಾರ್ಮೆಲ್‌ ವಿಶೇಷ ಚೇತನರ ಶಾಲೆ, ಕುಡಚಿಯ ದೇವರಾಜ ಅರಸು ಕಾಲೊನಿಯಲ್ಲಿರುವ ನಾಗನೂರು ಶ್ರೀ ಬಸವೇಶ್ವರ ಟ್ರಸ್ಟ್‌ ವೃದ್ಧಾಶ್ರಮ, ಹಿಡ್ಕಲ್‌ ಡ್ಯಾಮಿನ ಮಮತಾ ಅನಾಥಾಶ್ರಮ, ಕಲಭಾವಿಯ ದಯಾನಂದ ವಿದ್ಯಾಭಾರತಿ ಆಶ್ರಮ ಹಾಗೂ ಬೆಳಗಾವಿಯ ಆಶ್ರಯ ಫೌಂಡೇಶನ್‌ಗಳಿಗೆ ನೀಡಲಾಗುವುದು ಎಂದು ಅನ್ನಪೂರ್ಣಾ ಕಾರ್ಯಕ್ರಮದ ಸಂಚಾಲಕರಾದ ಮಹೇಂದ್ರ ಹೆಗಡೆ ಮತ್ತು ರವೀಂದ್ರ ಹುಲ್ಯಾಳ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ