ಆ್ಯಪ್ನಗರ

ನೀರು, ಮೇವಿನ ಸಮಸ್ಯೆಯ ವರದಿ ಸಲ್ಲಿಸಿ

ಹುಕ್ಕೇರಿ: ಮಾರ್ಚ್ ತಿಂಗಳ ಬಳಿಕ ಬಿಸಿಲು ಹೆಚ್ಚಾಗುತ್ತದೆ...

Vijaya Karnataka 25 Feb 2020, 5:00 am
ಹುಕ್ಕೇರಿ: ಮಾರ್ಚ್ ತಿಂಗಳ ಬಳಿಕ ಬಿಸಿಲು ಹೆಚ್ಚಾಗುತ್ತದೆ. ಹೀಗಾಗಿ ತಾಲೂಕಿನ 70 ಹಳ್ಳಿಗಳ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಆಗಬಹುದಾಗ ಮೇವಿನ ಸಮಸ್ಯೆಗಳ ಬಗ್ಗೆ ವಾರದಲ್ಲಿಸಂಪೂರ್ಣ ಮಾಹಿತಿ ನೀಡಬೇಕು ಎಂದು ಶಾಸಕ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web 24 HUKKERI 01_53
ಹುಕ್ಕೇರಿ ತಾಪಂ ಸಭಾ ಭವನದಲ್ಲಿಶಾಸಕ ಉಮೇಶ ಕತ್ತಿ ನೇತೃತ್ವದಲ್ಲಿಸಭೆ ನಡೆಯಿತು.


ತಾಲೂಕು ಪಂಚಾಯಿತಿ ಸಭಾಭನದಲ್ಲಿಆಯೋಜಿಸಿದ್ದ ಹುಕ್ಕೇರಿ ವಿಧಾನ ಸಭೆ ಕ್ಷೇತ್ರದ ಗ್ರಾಮಗಳ ಕುಂದುಕೊರತೆ ಸಭೆಯಲ್ಲಿಅವರು ಮಾತನಾಡಿದರು.

ಬಹುತೇಕ ಎಲ್ಲಗ್ರಾಮಗಳಲ್ಲಿಶುದ್ಧ ನೀರಿನ ಘಟಗಳು ಸ್ಥಗಿತವಾವೆ. ಅವುಗಳನ್ನು ದುರಸ್ತಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಅತಿವೃಷ್ಟಿ, ನೆರೆಯಿಂದ ಹಾಳಾದ ಮನೆಗಳ ದುರಸ್ತಿ, ಹೊಸ ಮನೆಗಳ ನಿರ್ಮಾಣ ಕಾಮಗಾರಿಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ತಿಗೊಳಿಸಬೇಕು ಎಂದು ಸೂಚಿಸಿದರು.

ವಾಲ್ಮೀಕಿ ಭವನ, ವಸತಿ ನಿಲಯ ಹಾಗೂ ಸಮುದಾಯ ಭವನಗಳನ್ನು ಯಾವ ಗ್ರಾಮಗಳಲ್ಲಿನಿರ್ಮಿಸಲು ಅವಕಾಶವಿದೆ ಎಂಬ ಕುರಿತು ಆಯಾ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಪಟ್ಟಣದ ಹೊರವಲಯದ ಕ್ಯಾರಗುಡ್ಡದಲ್ಲಿಶಿಕ್ಷಣ ಕೇಂದ್ರಗಳು, ವಸತಿ ನಿಲಯಗಳು ನಿರ್ಮಾಣಗೊಂಡಿವೆ. ಅಲ್ಲಿಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ನೆಡಬೇಕು ಎಂದು ಶಾಸಕರು ಸೂಚಿಸಿದರು.

ತಾಪಂ ಇಒ ಮಹಾದೇವ ಬಿರಾದಾರ ಪಾಟೀಲ, ಗ್ರೇಡ್‌- 2 ತಹಸೀಲ್ದಾರ ಕಿರಣ ಬೆಳವಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ