ಆ್ಯಪ್ನಗರ

ಕಬ್ಬಿನ ಬಿಲ್‌ ಬಾಕಿ: ಸಕ್ಕರೆ ಆಯುಕ್ತರಿಂದ ವಿಚಾರಣೆ

ಬೆಳಗಾವಿ: 2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ಲನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಿಲ್ಲ ಎಂದು ರೈತರು ಸಲ್ಲಿಸಿದ್ದ ದೂರು ಆಧರಿಸಿ ಸಕ್ಕರೆ ಆಯುಕ್ತ ...

Vijaya Karnataka 26 Jun 2019, 5:00 am
ಬೆಳಗಾವಿ : 2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ಲನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಿಲ್ಲ ಎಂದು ರೈತರು ಸಲ್ಲಿಸಿದ್ದ ದೂರು ಆಧರಿಸಿ ಸಕ್ಕರೆ ಆಯುಕ್ತ ಶಾಂತಾರಾಮ ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ವಿಚಾರಣೆ ನಡೆಸಿದರು.
Vijaya Karnataka Web BEL-25 LBS 6


ಅಥಣಿ, ಜೈನಾಪುರ, ಹಿರೇನಂದಿ, ಬೆಲ್ಲದ ಬಾಗೇವಾಡಿ, ಬೇಡಕಿಹಾಳ ಸೇರಿದಂತೆ ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳ ವಿರುದ್ಧ 500ಕ್ಕೂ ಹೆಚ್ಚು ರೈತರು ದೂರು ಸಲ್ಲಿಸಿದ್ದರು. ರೈತರು ಮತ್ತು ಕಾರ್ಖಾನೆಗಳ ಪ್ರತಿನಿಧಿಗಳ ವಿಚಾರಣೆ ನಡೆಸುವ ಉದ್ದೇಶದಿಂದ ಆಯಾ ಕಾರ್ಖಾನೆಗಳ ರೈತರಿಗೆ ಸಮಯ ನಿಗದಿ ಮಾಡಲಾಗಿತ್ತು. ಬೆಳಗ್ಗೆ 11ರಿಂದ ಸಂಜೆವರೆಗೆ ರೈತರು ವಿಚಾರಣೆಯಲ್ಲಿ ಭಾಗಿಯಾದರು.

ಸಕ್ಕರೆ ಆಯುಕ್ತ ಶಾಂತಾರಾಮ ಅವರು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ರೈತರ ವಿಚಾರಣೆ ನಡೆಸಿದ್ದಾರೆ. ರೈತರ ಕಬ್ಬಿನ ಬಾಕಿ ಪಾವತಿಸುವಂತೆ ಎಲ್ಲ ಕಾರ್ಖಾನೆಗಳಿಗೆ ಸೂಚಿಸಿದ್ದಾರೆ. ದೂರು ಸಲ್ಲಿಸಿದ್ದ ಬಹುತೇಕ ರೈತರು ವಿಚಾರಣೆಯಲ್ಲಿ ಭಾಗಿಯಾಗಿದ್ದರು.
- ಚೂನಪ್ಪ ಪೂಜಾರಿ, ರೈತ ಹೋರಾಟಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ