ಆ್ಯಪ್ನಗರ

ವ್ಯಕ್ತಿಯೊಬ್ಬರ ರಕ್ತದಾನದಿಂದ 3 ಜೀವಗಳ ಉಳಿವು

ಬಾವನಸೌಂದತ್ತಿ: ಆರೋಗ್ಯವಂತ ವ್ಯಕ್ತಿಯೊಬ್ಬ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಬಹುದು ಎಂದು ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಸ್‌ವಿ...

Vijaya Karnataka 30 Jun 2019, 5:00 am
ಬಾವನಸೌಂದತ್ತಿ : ಆರೋಗ್ಯವಂತ ವ್ಯಕ್ತಿಯೊಬ್ಬ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಬಹುದು ಎಂದು ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ವಿ. ಮುನ್ಯಾಳ ಹೇಳಿದರು.
Vijaya Karnataka Web BEL-29 BSDT 2


ಅವರು, ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿರಿ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ನಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದಾನಿಗಳು ನೀಡುವ ರಕ್ತವನ್ನು ಸಂಗ್ರಹಿಸಿ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ನೀಡಲಾಗುತ್ತಿದೆ. ಸಂಗ್ರಹಿಸಿದ ರಕ್ತವನ್ನು ಮೂರು ವಿಧದಲ್ಲಿ ವಿಂಗಡಿಸಲಾಗುವುದು. ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳೆಂದು ವಿಭಜಿಸಿ, ಆಯಾ ರೋಗಿಯ ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತಿದೆ. ಡೆಂಗೆ ರೋಗದಿಂದ ಬಳಲುತ್ತಿರುವವರಿಗೆ ಬಿಳಿ ರಕ್ತಗಳನ್ನು ನೀಡಲಾಗುವುದು. ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಮೂರು ವ್ಯಕ್ತಿಗಳನ್ನು ಬದುಕಿಸಬಹುದೆಂದು ಮಾಹಿತಿ ನೀಡಿದರು.

ಡಾ. ಪ್ರಿಯಾಂಕ ತಳವಾರ, ಡಾ. ಎಸ್‌.ವಿ. ಹುಣಶ್ಯಾಳ, ಡಾ. ಗಿರೀಶ ಕುಲಕರ್ಣಿ, ಡಾ. ಎಸ್‌.ಬಿ. ಪಾಟೀಲ, ಗ್ರಾಪಂ ಅಧ್ಯಕ್ಷ ಅಜೀತ ಖೆಮಲಾಪುರೆ, ಉಪಾಧ್ಯಕ್ಷೆ ಜಯಶ್ರೀ ಶಿಂಧೆ, ಅನೀಲ ಹಂಜೆ, ಶಾಂತಿನಾಥ ಪಾಟೀಲ, ದಶರಥ ಭೋವಿ, ಅರಿಹಂತ ಮಗದುಮ್ಮ, ದೀಪಾ ಹಿರೇಮಠ, ಪಿಡಿಒ ಎಸ್‌.ಆರ್‌. ಪಾಟೀಲ ಸೇರಿದಂತೆ ಅನೇಕರು ಇದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಜನರಿಂದ 48 ಯುನಿಟ್‌ ರಕ್ತ ಸಂಗ್ರಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ