ಆ್ಯಪ್ನಗರ

ಜನತಾ ಕಾಲನಿಗೆ ಸೌಲಭ್ಯ ಕಲ್ಪಿಸಲು ತಾಕೀತು

ಬೆಳಗಾವಿ: ಒಳಚರಂಡಿ ಅಭಿವೃದ್ಧಿ ಮಂಡಳಿಯಿಂದ ...

Vijaya Karnataka 28 Jan 2020, 5:00 am
ಬೆಳಗಾವಿ: ಒಳಚರಂಡಿ ಅಭಿವೃದ್ಧಿ ಮಂಡಳಿಯಿಂದ ಕಣಬರಗಿಯಲ್ಲಿನಿರ್ಮಿಸಿರುವ ಬಹುಮಡಿ ಕಟ್ಟಡದ ಜನತಾ ಕಾಲನಿಗೆ ಸೋಮವಾರ ಭೇಟಿ ನೀಡಿದ ಶಾಸಕ ಅನಿಲ ಬೆನಕೆ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web 27PRAMOD3073202
ಜನತಾ ಕಾಲನಿಯ ಸಮಸ್ಯೆಗಳ ಕುರಿತು 'ವಿಜಯ ಕರ್ನಾಟಕ' ಪ್ರಕಟಿಸಿದ ವರದಿಯನ್ನು ಅಧಿಕಾರಿಗಳಿಗೆ ತೋರಿಸುತ್ತಿರುವ ಶಾಸಕ ಅನಿಲ ಬೆನಕೆ.


ಜನತಾ ಕಾಲನಿ ಕಟ್ಟಡವನ್ನು ಪೂರ್ತಿಯಾಗಿ ನಿರ್ಮಿಸುವ ಮೊದಲೇ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗಿದೆ. ಅರು ತಿಂಗಳಿಂದ ವಿದ್ಯುತ್‌, ನೀರಿನ ವ್ಯವಸ್ಥೆ ಕಲ್ಪಿಸಿಲ್ಲಮತ್ತು ಇನ್ನಿತರ ಮೂಲಸೌಕರ್ಯ ಕೊಡದೇ ಇರುವ ಬಗ್ಗೆ 'ವಿಕ' ಜ.25ರ ಸಂಚಿಕೆಯಲ್ಲಿ'ಕಗ್ಗತ್ತಲಲ್ಲಿಜನತಾ ಕಾಲನಿ ಬದುಕು' ಎನ್ನುವ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು. ಶಾಸಕರು ವಿಕ ವರದಿಯ ಪ್ರತಿಯೊಂದಿಗೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಜನತಾ ಕಾಲನಿಯ ನಿವಾಸಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ'ವಿಕ' ವರದಿಯನ್ನು ಪೂರ್ಣವಾಗಿ ಓದಿದರು.

ಆರು ತಿಂಗಳಿಂದ ವಿದ್ಯುತ್‌, ನೀರಿನ ಸಂಪರ್ಕ ಕೊಡದೆ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ಎಲ್ಲಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಒಂದು ವಾರದೊಳಗೆ ತಾತ್ಕಾಲಿಕ ವ್ಯವಸ್ಥೆ ಮೂಲಕವಾದರೂ ವಿದ್ಯುತ್‌ ಸಂಪರ್ಕ ಕೊಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

ಕಾಲನಿಗೆ ಶೀಘ್ರದಲ್ಲಿಕುಡಿಯುವ ನೀರು, ವಿದ್ಯುತ್‌ ಸಂಪರ್ಕದ ಪೂರ್ಣ ವ್ಯವಸ್ಥೆ ಮಾಡಿ ಎರಡು ತಿಂಗಳ ಒಳಗೆ ಬಾಕಿ ಇರುವ ಎಲ್ಲಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎಲ್‌. ಲಮಾಣಿ ಭರವಸೆ ನೀಡಿದರು.

ಹಣ ಪಾವತಿಸಲು 2 ದಿನ ಅವಕಾಶ:
ಮನೆ ವಿತರಿಸಿದರೂ ಅದಕ್ಕೆ ಸಂಬಂಧಿಸಿದ ಹಣವನ್ನು ಮಹಾನಗರ ಪಾಲಿಕೆ ಮಂಡಳಿಗೆ ಭರಿಸಿಲ್ಲ. ಹಾಗಾಗಿ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲಎಂದು ಅಧಿಕಾರಿಗಳು ಶಾಸಕರ ಬಳಿ ಸಮಸ್ಯೆ ಹೇಳಿದರು.

''ಹೆಚ್ಚಿನವರು ಹಣ ಭರಿಸಿಲ್ಲ. ಆದರೂ ಮನೆಯಲ್ಲಿಉಳಿದುಕೊಂಡಿದ್ದಾರೆ'' ಎಂದು ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಛಾಯಾ ಕೋತಿ ಅವರು ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ''ಮಂಡಳಿಗೆ ಕೂಡಲೇ ಹಣ ಪಾವತಿಸಿ'' ಎಂದರು. ಅಲ್ಲದೆ, ''ಪಾಲಿಕೆಗೆ ಹಣ ಭರಿಸದೆ ಅಕ್ರಮವಾಗಿ ಮನೆಯಲ್ಲಿಉಳಿದುಕೊಂಡವರಿಗೆ ಹಣ ಪಾವತಿಸಲು ಎರಡು ದಿನಗಳ ಕಾಲಾವಕಾಶ ನೀಡಿ. ತಪ್ಪಿದರೆ ಅವರನ್ನು ಕೈ ಬಿಟ್ಟು ಬೇರೆಯವರಿಗೆ ಮನೆ ಕೊಡಿ'' ಎಂದು ಶಾಸಕ ಅನಿಲ ಬೆನಕೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ