ಆ್ಯಪ್ನಗರ

ನರ್ಸರಿ ಪ್ಲಾಂಟ್‌ಗೆ ತಾಪಂ ಅಧ್ಯಕ್ಷೆ ಸುಜಾತಾ ಭೇಟಿ

ರಾಯಬಾಗ : ಗ್ರಾಮೀಣ ಭಾಗದ ಹುಲ್ಯಾಳ ಕೆರೆಯ ಸಮೀಪ ಸಾಮಾಜಿಕ ಅರಣ್ಯ ವಲಯದ ವತಿಯಿಂದ ನಿರ್ಮಿಸಿರುವ ನರ್ಸರಿ ಪ್ಲಾಂಟ್‌ಗೆ ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ ಭೇಟಿ ...

Vijaya Karnataka 8 Feb 2019, 5:00 am
ರಾಯಬಾಗ : ಗ್ರಾಮೀಣ ಭಾಗದ ಹುಲ್ಯಾಳ ಕೆರೆಯ ಸಮೀಪ ಸಾಮಾಜಿಕ ಅರಣ್ಯ ವಲಯದ ವತಿಯಿಂದ ನಿರ್ಮಿಸಿರುವ ನರ್ಸರಿ ಪ್ಲಾಂಟ್‌ಗೆ ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ ಭೇಟಿ ನೀಡಿದರು.
Vijaya Karnataka Web BEL-7RAIBAG3PHOTO


ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅರಣ್ಯ ವಯಲದ ಅಧಿಕಾರಿಗಳು ಬೆಳೆಸಿರುವ ನರ್ಸರಿ ಪ್ಲಾಂಟ್‌ ತುಂಬಾ ಅಚ್ಚುಕಟ್ಟಾಗಿದೆ. ತಾಲೂಕಿನ ಶಾಲೆಯ ಆವರಣಗಳಲ್ಲಿ, ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿರುವಂತೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಸಾಮಾಜಿಕ ಅರಣ್ಯ ವಲಯಾಧಿಕಾರಿ ಎಸ್‌.ಬಿ. ಹೇರೆಕರ ಮಾತನಾಡಿ, ಡಿಸಿಎಫ್‌ ಅಶೋಕ ಪಾಟೀಲ ಹಾಗೂ ಎಸಿಎಫ್‌ ಎಸ್‌.ಪಿ. ಅಭಯಂಕರ ಅವರ ಮಾರ್ಗದರ್ಶನದಲ್ಲಿ ನರ್ಸರಿ ಪ್ಲಾಂಟ್‌ ನಿರ್ಮಾಣಗೊಂಡಿದ್ದು, ಇಲ್ಲಿ ಬೇವು, ಆಲ, ಬಸರಿ, ಬದಾಮ, ತಪಸಿ ಸಸಿಗಳ ನರ್ಸರಿ ಮಾಡಲಾಗಿದೆ. ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಈಗಾಗಲೇ 13500 ಸಸಿಗಳನ್ನು ನೆಡಲಾಗಿದೆ. ಸಾಗವಾನಿ ಗಿಡ ಬೆಳೆಯುವ ರೈತರಿಗೆ ಸಾಗವಾನಿ ಸಸಿಗಳನ್ನು ಮತ್ತು ಶಾಲೆ ಆವರಣದಲ್ಲಿ ಬೆಳೆಯಲು ವಿವಿಧ ತಳಿ ಸಸಿಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ಈ ವೇಳೆ ಸಾಮಾಜಿಕ ಅರಣ್ಯ ಸಿಬ್ಬಂದಿ ಆರ್‌.ಎಸ್‌. ಕಾಮತ, ಸಿ.ಆರ್‌. ಹುಣಸ್ಯಾಳ ಮತ್ತು ಗೋಮಟೇಶ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ