ಆ್ಯಪ್ನಗರ

ಬಸ್‌ ನಿಲ್ದಾಣದಲ್ಲಿ ಕಿತ್ತು ಹೋದ ಡಾಂಬರೀಕರಣ

ತೆಲಸಂಗ: ಗ್ರಾಮದ ಬಸ್‌ ನಿಲ್ದಾಣದ ಮೈದಾನದಲ್ಲಿ ಡಾಂಬರೀಕರಣ ಸಂಪೂರ್ಣ ಕಿತ್ತುಹೋಗಿದೆ...

Vijaya Karnataka 9 Jun 2019, 5:00 am
ತೆಲಸಂಗ : ಗ್ರಾಮದ ಬಸ್‌ ನಿಲ್ದಾಣದ ಮೈದಾನದಲ್ಲಿ ಡಾಂಬರೀಕರಣ ಸಂಪೂರ್ಣ ಕಿತ್ತುಹೋಗಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ನಿಲ್ದಾಣದಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ನಿಲ್ದಾಣದೊಳಗಡೆ ಬಸ್‌ಗಳು ಬರುತ್ತಿದ್ದಂತೆ ಪ್ರಯಾಣಿಕರು ಜಾಗೃತಗೊಳ್ಳದಿದ್ದರೆ ಮೈ ನುಗ್ಗಾಗುವುದು ಖಚಿತ. ಸ್ವಲ್ಪ ಮಳೆಯಾದರೂ ಮೈದಾನದ ಗುಂಡಿಗಳಲ್ಲಿ ನೀರು ತುಂಬಿ ಸಂಚಾರಿಗಳಿಗೆ ನಿಂತ ಕೊಳಕು ನೀರಿನ ಅಭಿಷೇಕ ತಪ್ಪಿದ್ದಲ್ಲ.
Vijaya Karnataka Web BEL-8TELSANG1


ಮಳೆಯಾದಾಗ ರೊಜ್ಜಿನಿಂದಾಗಿ ಮೈದಾನವೆಲ್ಲ ಕೆಸರು ಗದ್ದೆಯಾಗಿ ಮಾರ್ಪಟ್ಟು ಮೈದಾನದಿಂದ ಪ್ರತಿದಿನ ಸಂಚರಿಸುವ ನೂರಾರು ಬಸ್‌ಗಳ ಪ್ರಯಾಣಿಕರ ಸಂಚಾರಕ್ಕೆ ಅನಾನುಕೂಲವಾಗುತ್ತದೆ. ಆದರೂ ಯಾವ ಅಧಿಕಾರಿಯೂ ನಿಲ್ದಾಣದ ಮೈದಾನ ಡಾಂಬರೀಕರಣಕ್ಕೆ ಮುಂದಾಗುತ್ತಿಲ್ಲ. ಈ ಕುರಿತು ಸಾರ್ವಜನಿಕರು, ಗ್ರಾಮಸ್ಥರು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮೈದಾನ ದುರಸ್ತಿಗಾಗಿ ಮನವಿ ಮಾಡಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಇನ್ನು ಮುಂದಾದರೂ ಬಸ್‌ ನಿಲ್ದಾಣದ ಮೈದಾನದಲ್ಲಿ ಡಾಂಬರೀಕರಣ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ