ಆ್ಯಪ್ನಗರ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವೆಬ್‌ಸೈಟ್‌ ಸಿದ್ಧ ಪಡಿಸಿದ ಶಿಕ್ಷಕ

ನಾಗನೂರ ಪಿಕೆ (ಬೆಳಗಾವಿ): ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ...

Vijaya Karnataka 15 Feb 2020, 5:00 am
ನಾಗನೂರ ಪಿಕೆ (ಬೆಳಗಾವಿ): ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ವಿಷಯದ ಶಿಕ್ಷಕ ಉಮೇಶ ಹಿರೇಮನಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವೆಬ್‌ಸೈಟ್‌ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
Vijaya Karnataka Web 14Naganur pk 1
ಉಮೇಶ ಹಿರೇಮನಿ


ಅವರು ರೂಪಿಸಿದ http://www.theresourcesworld.com ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ರಾಜ್ಯದ ಬೇರೆ ಶಾಲೆಯ ಶಿಕ್ಷಕರು ತಯಾರಿಸಿದ ನೋಟ್ಸ್‌, ಪಾಸಿಂಗ್‌ ಪ್ಯಾಕೇಜ್‌ ಮತ್ತು ಪರೀಕ್ಷಾ ದೃಷ್ಟಿಯಿಂದ ಅತ್ಯುಪಯುಕ್ತ ಮಾಹಿತಿ ಕ್ರೋಢೀಕರಿಸಿ ಒಂದೇ ಕಡೆ ಲಭ್ಯವಾಗುವಂತೆ ಮಾಡಿದ್ದಾರೆ. ಶಿಕ್ಷಕರಿಗೆ ಉಪಯುಕ್ತವಾಗುವ ಮಾಹಿತಿಗಳೂ ವೆಬ್‌ಸೈಟ್‌ನಲ್ಲಿವೆ.

ಪರೀಕ್ಷೆ ಬರೆಯುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ವೆಬ್‌ಸೈಟ್‌ನಲ್ಲಿಹಲವು ಉಪಯುಕ್ತ ಮಾಹಿತಿಗಳು ಇವೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪರೀಕ್ಷೆಗೆ ಉಪಯುಕ್ತವಾಗುವ ಎಲ್ಲತರಹದ ನೋಟ್ಸ್‌ಗಳನ್ನು ಈ ವೆಬ್‌ಸೈಟ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲೂಈ ವೆಬ್‌ಸೈಟ್‌ ಓಪನ್‌ ಆಗುತ್ತದೆ.

''ಈ ವರ್ಷದ ಮಾರ್ಚ್ನಲ್ಲಿಪ್ರಾರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಮಂಡಳಿಯವರು ಪ್ರಶ್ನೆ ಪತ್ರಿಕೆಯಲ್ಲಿಸ್ವಲ್ಪ ಬದಲಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೆಬ್‌ಸೈಟ್‌ ಸಿದ್ಧಪಡಿಸಿದ್ದೇನೆ'' ಎಂದು ಶಿಕ್ಷಕ ಉಮೇಶ ಹಿರೇಮನಿ ತಿಳಿಸಿದ್ದಾರೆ.

ಪ್ರತಿಭಾನ್ವಿತ ಶಿಕ್ಷಕ:
ವೆಬ್‌ಸೈಟ್‌ ನಿರ್ಮಾತೃ ಉಮೇಶ ಹಿರೇಮನಿ 15 ವರ್ಷಗಳ ತಮ್ಮ ಸೇವಾವಧಿಯಲ್ಲಿಅನೇಕ ಶೈಕ್ಷಣಿಕ ಚಟುವಟಿಕೆಗಳಲ್ಲಿತೊಡಗಿದ್ದಾರೆ. ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ 2017-18ನೇ ಸಾಲಿನ ಜಿಲ್ಲಾಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಇವರ ವೆಬ್‌ಸೈಟ್‌ ಸಾಧನೆಗೆ ಶಾಲೆಯ ಮುಖ್ಯಾಧ್ಯಾಪಕ ಶಿವಾನಂದ ದೊಡಮನಿ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ