ಆ್ಯಪ್ನಗರ

ಮಹಿಳೆಗೆ ವಂಚಿಸಿ ಚಿನ್ನಾಭರಣ ದೋಚಿದ್ದ ಆರೋಪಿ ಬಂಧನ

ಬೆಳಗಾವಿ: ಸರಕಾರಿ ಯೋಜನೆಯಲ್ಲಿ 60 ಸಾವಿರ ರೂ ಹಣ ಕೊಡಿಸುವುದಾಗಿ ಮಹಿಳೆಗೆ ನಂಬಿಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಓರ್ವ ಪೊಲೀಸರ ಅತಿಥಿಯಾಗಿದ್ದಾನೆ...

Vijaya Karnataka 4 Oct 2018, 5:00 am
ಬೆಳಗಾವಿ: ಸರಕಾರಿ ಯೋಜನೆಯಲ್ಲಿ 60 ಸಾವಿರ ರೂ. ಹಣ ಕೊಡಿಸುವುದಾಗಿ ಮಹಿಳೆಗೆ ನಂಬಿಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಓರ್ವ ಪೊಲೀಸರ ಅತಿಥಿಯಾಗಿದ್ದಾನೆ. ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರ ಗ್ರಾಮದ ಸುರೇಶ ಯಲ್ಲಪ್ಪ ನರಸನ್ನವರ ಬಂಧಿತ.
Vijaya Karnataka Web BEL-3 LBS 22


ಈತ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸತ್ತೆವ್ವ ಶಾಂತಪ್ಪ ಕರಿಗಾರ ಎಂಬಾಕೆಗೆ 'ನಿಮ್ಮ ಮಗಳಿಗೆ ಸರಕಾರಿ ಯೋಜನೆಯಲ್ಲಿ 60 ಸಾವಿರ ರೂ. ಕೊಡಿಸುತ್ತೇನೆ. ದಾಖಲಾತಿಯೊಂದಿಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬನ್ನಿ' ಎಂದು ತಿಳಿಸಿದ್ದಾನೆ. ನಂಬಿದ ಸತ್ತೆವ್ವ ಮಗಳೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. 'ಚಿನ್ನಾಭರಣ ಹಾಕಿಕೊಂಡಿರುವುದನ್ನು ನೋಡಿದರೆ 60 ಸಾವಿರ ರೂ. ನೀಡುವುದಿಲ್ಲ. ಮಗಳ ಹತ್ತಿರ ಕೊಟ್ಟು ಬನ್ನಿ' ಎಂದು ಸತ್ತೆವ್ವರನ್ನು ಕರೆದುಕೊಂಡು ಸುರೇಶ ನರಸನ್ನವರ ಸ್ವಲ್ಪ ದೂರ ಹೋಗಿದ್ದಾನೆ. ನಂತರ ಏನೋ ಕೆಲಸದ ನೆಪ ಮಾಡಿಕೊಂಡು 'ಇಲ್ಲೇ ಕುಳಿತಿರಿ, ಬರುತ್ತೇನೆ' ಎಂದು ಹೇಳಿ, ಮಗಳ ಹತ್ತಿರ ಬಂದು 'ನಿಮ್ಮ ತಾಯಿ ಚಿನ್ನಾಭರಣ ಕೊಡುವಂತೆ ಹೇಳಿದ್ದಾರೆ' ಎಂದು ಸುಳ್ಳು ಹೇಳಿ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ.

ಘಟನೆ ಕುರಿತು ಸತ್ತೆವ್ವ ಕರಿಗಾರ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಆರೋಪಿ ಸುರೇಶನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ