ಆ್ಯಪ್ನಗರ

ಶಿಕ್ಷಣ ಕ್ಷೇತ್ರ ಗಲೀಜಾಗಲು ಮೈತ್ರಿ ಸರಕಾರ ಕಾರಣ

ಅಥಣಿ: ಹಿಂದಿನ ದೋಸ್ತಿ ಸರಕಾರದ ರಾಜಕೀಯ ಹಸ್ತಕ್ಷೇಪದಿಂದಾಗಿ ಶಿಕ್ಷಣ ಕ್ಷೇತ್ರ ...

Vijaya Karnataka 2 Aug 2019, 5:00 am
ಅಥಣಿ: ಹಿಂದಿನ ದೋಸ್ತಿ ಸರಕಾರದ ರಾಜಕೀಯ ಹಸ್ತಕ್ಷೇಪದಿಂದಾಗಿ ಶಿಕ್ಷಣ ಕ್ಷೇತ್ರ ಗಲೀಜಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ವಿಷಾದಿಸಿದರು.
Vijaya Karnataka Web the alliance government is responsible for the messing up of the education sector
ಶಿಕ್ಷಣ ಕ್ಷೇತ್ರ ಗಲೀಜಾಗಲು ಮೈತ್ರಿ ಸರಕಾರ ಕಾರಣ


ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ''ಬಸವರಾಜ ಹೊರಟ್ಟಿ ಅವರು ಶಿಕ್ಷ ಣ ಮಂತ್ರಿಗಳಾಗಿದ್ದಾಗ ಶಿಕ್ಷ ಣ ಇಲಾಖೆಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪವಾಗುತ್ತಿರಲಿಲ್ಲ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ರಾಜಕೀಯ ಬೆರೆಸಿತು'', ಎಂದು ದೂರಿದರು.

''ಕಳೆದ 6 ವರ್ಷಗಳಲ್ಲಿ ಕಾಂಗ್ರೆಸ್‌ ಸರಕಾರ ಕೇವಲ ಎರಡು ಬಾರಿ ಮಾತ್ರ ಶಿಕ್ಷ ಕರ ನೇಮಕಾತಿ ಪ್ರಕ್ರಿಯೆ, ಕಡ್ಡಾಯ ವರ್ಗಾವಣೆ. ಘಟಕದ ವರ್ಗಾವಣೆ ಮಾಡಿದೆ. ಇದನ್ನು ಬಿಟ್ಟು ಶಿಕ್ಷ ಕರಿಗೆ ಪೂರಕ ಯಾವುದೇ ವಿಶೇಷ ಕಾರ್ಯಗಳನ್ನು ಮಾಡಿಲ್ಲ'', ಎಂದ ಅವರು, ''ರಾಷ್ಟ್ರೀಯ ಶಿಕ್ಷ ಣ ನೀತಿ-2019 ಸಮರ್ಪಕ ಅನುಷ್ಠಾನವಾದರೆ ಶಿಕ್ಷ ಣ ಇಲಾಖೆ ಅಗಾಧ ಬದಲಾವಣೆ ಕಾಣಲಿದೆ'', ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ