ಆ್ಯಪ್ನಗರ

ಮುಸ್ಲಿಂ ಸಮಾಜದಿಂದ ಯೋಧರ ಹತ್ಯೆಗೆ ಖಂಡನೆ

ಹುಕ್ಕೇರಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ವಿಧ್ವಂಸಕ ದಾಳಿ ಖಂಡಿಸಿ ಮುಸ್ಲಿಂ ಸಮುದಾಯದ 11 ಜಮಾತದ ಮುಖಂಡರು ಪ್ರತಿಭಟನೆ ...

Vijaya Karnataka 18 Feb 2019, 5:00 am
ಹುಕ್ಕೇರಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ವಿಧ್ವಂಸಕ ದಾಳಿ ಖಂಡಿಸಿ ಮುಸ್ಲಿಂ ಸಮುದಾಯದ 11 ಜಮಾತದ ಮುಖಂಡರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ ಅವರಿಗೆ ಮನವಿ ಅರ್ಪಿಸಿದರು.
Vijaya Karnataka Web BEL-17 HUKKERI 01


ಮುಸ್ಲಿಂ ಸಮಾಜದ 11 ಜಮಾತ ಅಧ್ಯಕ್ಷ ಡಾ. ಎಸ್‌.ಕೆ. ಮಕಾನದಾರ ಮಾತನಾಡಿ, ದೇಶದ ಯೋಧರನ್ನು ಬಲಿ ಪಡೆದ ಉಗ್ರವಾದವನ್ನು ಬುಡಸಮೇತ ನಿರ್ನಾಮ ಮಾಡಬೇಕು. ಉಗ್ರವಾದಿಗಳ ಆತ್ಮಾಹುತಿ ಬಾಂಬ್‌ ದಳಿ ಒಂದು ಹೇಯಕೃತ್ಯವಾಗಿದೆ. ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು. ಯೋಧರನ್ನು ಮರಳಿ ಕೂಡುವ ಶಕ್ತಿ ನಮಗಿಲ್ಲ. ಆದರೆ ಅವರ ಕುಟುಬಂಕ್ಕೆ ಧೈರ್ಯ ನೀಡಿ ಆಸರೆ ನೀಡಬೇಕಿದೆ ಮನವಿ ಮಾಡಿದ ಅವರು 'ದೇಶ ಕಾಯುವ ಸೈನಿಕನ ರೆಟ್ಟೆಗೆ ಆ ಭಗವಂತ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿದರು.

11 ಜಮಾತ ಸಮಾಜದ ಮುಖಂಡರಾದ ಸಲೀಮ ನಧಾಪ, ನಿಸಾರ ನಧಾಪ, ಖಾಜಿಸಾಹೇಬ, ಉಸ್ಮಾನ ಮುಲ್ಲಾ, ವೀರ ಹುನಚಿಹಾಳಕರ, ಕಾಜಸಾಬ ಕಳಾವಂತ, ನಹೀಬ ನಧಾಪ, ನ್ಯಾಮಮತ ಮೋಮಿನ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ