ಆ್ಯಪ್ನಗರ

ಬಾವಿಗೆ ಬೈಕ್‌ ಬಿದ್ದು ಸವಾರ ಸಾವು: ನನ್ನ ತಳ್ಳಿ ಆತ ಹಾರಿದ ಎಂದ ಮಹಿಳೆ

ನಿಯಂತ್ರಣ ತಪ್ಪಿದ ಬೈಕ್ ನೂರು ಅಡಿಗೂ ಹೆಚ್ಚು ಆಳದ ಬಾವಿಗೆ ಬಿದ್ದು, ಸವಾರ ಲಕಪ್ಪಾ ಬೂದಿಹಾಳ (30) ಮೃತಪಟ್ಟಿದ್ದಾರೆ.

Vijaya Karnataka Web 9 Nov 2017, 2:31 pm
ಬೆಳಗಾವಿ: ಬೈಕ್ ನೂರು ಅಡಿಗೂ ಹೆಚ್ಚು ಆಳದ ಬಾವಿಗೆ ಬಿದ್ದು, ಸವಾರ ಲಕ್ಕಪ್ಪ ಬೂದಿಹಾಳ (30) ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಅಕ್ಕವ್ವಾ ಖೋತ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web the bike fell into the well
ಬಾವಿಗೆ ಬೈಕ್‌ ಬಿದ್ದು ಸವಾರ ಸಾವು: ನನ್ನ ತಳ್ಳಿ ಆತ ಹಾರಿದ ಎಂದ ಮಹಿಳೆ


ಚಿಕ್ಕೋಡಿ ತಾಲೂಕಿನ ಮಿರಾಪುರಟ್ಟಿ ಗ್ರಾಮದ ಹೊರವಲಯದಲ್ಲಿ ಈ ನಡೆದಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಮೃತದೇಹವನ್ನು ಕ್ರೇನ್ ಮೂಲಕ ಬಾವಿಯಿಂದ ಹೊರತೆಗೆಯಲಾಗಿದೆ. ಚಿಕ್ಕೋಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ತನಿಖೆ ನಡೆಸಿದ್ದಾರೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ತಳ್ಳಿದ

'ಲಕ್ಕಪ್ಪ ಕಬ್ಬೂರಿಗೆ ಹೋಗೊಣ ಬಾ ಎಂದು ಫೋನ್ ಮಾಡಿ ಕರೆದ. ನಾನು ಅವನ ಜತೆ ಹೋದಾಗ ರಾತ್ರಿ ಬೈಕ್ ಲೈಟ್ ಆಫ್ ಮಾಡಿ ನನ್ನನ್ನು ಬಾವಿಯಲ್ಲಿ ನೂಕಿದ. ನಂತರ ತಾನು ಬೈಕ್ ಜತೆ ಬಾವಿಗೆ ಹಾರಿದ ಎಂದು ಮಾಧ್ಯಮಗಳಿಗೆ ಗಾಯಾಳು ಮಹಿಳೆ ಅಕ್ಕವ್ವ ಖೋತ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ