ಆ್ಯಪ್ನಗರ

ಬಿಜೆಪಿ ಸರಕಾರ ಅನರ್ಹ ಶಾಸಕರ ಕೈಬಿಡಲ್ಲ

ಘಟಪ್ರಭಾ (ಬೆಳಗಾವಿ): ರಾಜ್ಯದಲ್ಲಿಬಿಜೆಪಿ ಸರಕಾರ 17 ಜನ ಅನರ್ಹ ಶಾಸಕರ ಸಹಾಯದಿಂದಲೇ ...

Vijaya Karnataka 3 Nov 2019, 5:00 am
ಘಟಪ್ರಭಾ (ಬೆಳಗಾವಿ): ರಾಜ್ಯದಲ್ಲಿಬಿಜೆಪಿ ಸರಕಾರ 17 ಜನ ಅನರ್ಹ ಶಾಸಕರ ಸಹಾಯದಿಂದಲೇ ರಚನೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಅವರನ್ನು ಈ ಸರಕಾರ ಕೈಬಿಡುವುದಿಲ್ಲಎಂದು ಕೆಎಂಎಫ್‌ ರಾಜ್ಯಾಧ್ಯಕ್ಷರೂ ಆಗಿರುವ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಯ ನೀಡಿದ್ದಾರೆ.
Vijaya Karnataka Web 02GPB-02_53


ಗ್ರಾಮದಲ್ಲಿಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

''ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಒಂದು ವೇಳೆ ಜೆಡಿಎಸ್‌ ತಮ್ಮ ಸರಕಾರಕ್ಕೆ ಬೆಂಬಲ ನೀಡಿದರೆ ಅನರ್ಹ ಶಾಸಕರು ಅತಂತ್ರರಾಗುತ್ತಾರಲ್ಲವೆ?'', ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಸರಕಾರಕ್ಕೆ ಜೆಡಿಎಸ್‌ ಬೆಂಬಲ ಪಡೆಯುವ ಅಗತ್ಯವಿಲ್ಲ. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಅನರ್ಹ ಶಾಸಕರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ'', ಎಂದರು.

ಗೋಕಾಕ ರಾಜಕಾರಣದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಬರುವ ತನಕ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಸಹೋದರರಾದ ರಮೇಶ್‌, ಸತೀಶ್‌ ಹಾಗೂ ಲಖನ್‌ ಜಾರಕಿಹೊಳಿಯವರ ಬಳಿ ಈವರೆಗೆ ನಾನು ಯಾವುದೇ ಮಾತುಕತೆ ನಡೆಸಿಲ್ಲ.
- ಬಾಲಚಂದ್ರ ಜಾರಕಿಹೊಳಿ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ