ಆ್ಯಪ್ನಗರ

ಕನ್ನಡಕ್ಕೆ ಜೈನ ಸಾಹಿತ್ಯದ ಕೊಡುಗೆ ಅಪಾರ

ರಾಯಬಾಗ: ಸಕಲ ಧರ್ಮಗಳು ಹಾಗೂ ಸಕಲ ಜೀವ ರಾಶಿಗಳನ್ನು ಸಮಾನವಾಗಿ ಕಾಣುವುದೇ ಜೈನ ಧರ್ಮದ ಮೂಲ ಮಂತ್ರ ಎಂದು ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ...

Vijaya Karnataka 26 Nov 2018, 5:00 am
ರಾಯಬಾಗ : ಸಕಲ ಧರ್ಮಗಳು ಹಾಗೂ ಸಕಲ ಜೀವ ರಾಶಿಗಳನ್ನು ಸಮಾನವಾಗಿ ಕಾಣುವುದೇ ಜೈನ ಧರ್ಮದ ಮೂಲ ಮಂತ್ರ ಎಂದು ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web BEL-25RAIBAG2PHOTO


ಅವರು ಪಟ್ಟಣದ ಮಹಾವೀರ ಭವನದಲ್ಲಿ ಕರ್ನಾಟಕ ಜೈನ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ 5ನೇ ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತ್ಯವು ವ್ಯಕ್ತಿಯೊಬ್ಬನ ಭಾಷೆ, ಭಾವನೆ, ಕಂಠವನ್ನು ಶುದ್ಧ ಮಾಡಿ ಆತನನ್ನು ಮನುಷ್ಯನನ್ನಾಗಿ ರೂಪಿಸಿತು. 9ರಿಂದ 12ನೇ ಶತಮಾನದ ಕಾಲವು ಜೈನ ಸಾಹಿತ್ಯಕ್ಕೆ ಸುವರ್ಣಯುಗವಾಗಿತ್ತು. ಅಂದಿನ ರಾಜರು ಜೈನ ಕವಿಗಳಿಗೆ ರಾಜಾಶ್ರಯ ನೀಡಿ ಜೈನ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರಿಂದ ಅಂದು ಜೈನ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದರು.

ಧಾರವಾಡ ಕವಿವಿ ಜೈನ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್‌.ಪಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡಕ್ಕೆ ಜೈನ ಸಾಹಿತಿಗಳ ಕೊಡುಗೆ ವಿವರಿಸಿದರು.

ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ರಟ್ಟರ ಕಾಲದಲ್ಲಿ ವಿದ್ಯಾಕಾಶಿ ಎನ್ನಿಸಿಕೊಂಡಿದ್ದ ಹಾಗೂ ಜೈನ ತೀರ್ಥಂಕರ ವಿಗ್ರಹಗಳು ದೊರಕಿದ ಪುಣ್ಯ ಭೂಮಿ ರಾಯಬಾಗದಲ್ಲಿ ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಆಯೋಜಿಸಿರುವದು ಶ್ಲಾಘನೀಯ ಎಂದರು.

ಡಾ. ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಲಕ್ಷ್ಮೀಸೇನ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಶೀತಲ ಬೆಡಕಿಹಾಳೆ ಅಧ್ಯಕ್ಷತೆ ವಹಿಸಿದ್ದರು. ಜಲತ್ಕುಮಾರ ಪುಣಜಗೌಡರ ಜೈನ ಸಾಹಿತ್ಯ ಬೆಳವಣಿಗೆಯ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪ್ರಣಯ ಪಾಟೀಲ, ವಿನೋದ ದೊಡ್ಡಣ್ಣವರ, ತ್ರಿಕಾಲ ಪಾಟೀಲ, ಡಿ.ಸಿ. ಸದಲಗಿ, ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ, ಐ.ಡಿ. ಪಾಟೀಲ, ಅಣ್ಣಾಸಾಹೇಬ ಹವಲೆ, ಸತ್ಯಕುಮಾರ ಬಿರಾಜ, ಪಾರೀಶ ಉಗಾರೆ ಮತ್ತಿತರರು ಉಪಸ್ಥಿತರಿದ್ದರು.

ಮಹಾವೀರ ಪಾಟೀಲ ಸ್ವಾಗತಿಸಿದರು. ವೀಣಾ ಹುಳಬತ್ತೆ ನಿರೂಪಿಸಿದರು. ಎ.ಟಿ. ಸವದತ್ತಿ ವಂದಿಸಿದರು.

ಬೆಳಿಗ್ಗೆ ಜೈನ ಮಠದಲ್ಲಿ ಆದಿನಾಥ ತೀರ್ಥಂಕರರಿಗೆ ಸ್ವಾಮೀಜಿಯವರು ಪಂಚಾಮೃತ ಅಭಿಷೇಕ ಮಾಡಿ, ಧ್ಜಜಾರೋಹಣ ನೆರವೇರಿಸಿದರು. ನಂತರ ಪಟ್ಟಣದಲ್ಲಿ ಗ್ರಂಥದಿಂಡಿ ಹಾಗೂ ಮೆರವಣಿಗೆ ನಡೆಯಿತು.

ಭಟ್ಟಾರಕರತ್ನ ಡಾ. ಲಕ್ಷ್ಮೀಸೇನ ಸ್ವಾಮೀಜಿಗಳ ಜೀವನ, ಕಾರ್ಯ ಹಾಗೂ ಪದ್ಮನಂದಿ ಆಚಾರ್ಯ ವಿರಚಿತ ಪದ್ಮನಂದಿ ಶ್ರಾವಕಾಚಾರ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ