ಆ್ಯಪ್ನಗರ

ಬೆಳೆಗೆ ಪೋಷಕಾಂಶ ಕೊರತೆ ಆಗದಿರಲಿ

ಗೋಕಾಕ : ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅರಬಾವಿ ...

Vijaya Karnataka 28 Apr 2019, 5:00 am
ಗೋಕಾಕ : ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅರಬಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಪ್ರಭಾರಿ ಡೀನ್‌ ಡಾ. ಚಂದ್ರಶೇಖರ ಹಂಚಿನಮನಿ ಹೇಳಿದರು.
Vijaya Karnataka Web BEL-27GOK1A


ತಾಲೂಕಿನ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಕೃಷಿ ವಿಚಾರ ಸಂಕಿರಣದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಬೇಸಾಯ ಮಾಡುವುದರಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು ಎಂದರು. ಬೆಳೆಗಳಿಗೆ ಎಷ್ಟು ನೀರು ಬೇಕೊ, ಅಷ್ಟೇ ಪ್ರಮಾಣದಲ್ಲಿ ಪೂರೈಸಬೇಕು. ಇಲ್ಲದಿದ್ದರೆ ಬೆಳೆಗಳು ಹಾನಿಯಾಗಿ ಇಳುವರಿ ಕಡಿಮೆಯಾಗುವುದು ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ವಿಸ್ತರಣಾ ಅಧಿಕಾರಿ ಡಾ. ಕಾಂತರಾಜ ವಿ. ಮಾತನಾಡಿ ತೋಟಗಾರಿಕೆ ಬೆಳೆಗಳಲ್ಲಿ ಬೆಳಗಾವಿ ಜಿಲ್ಲೆಯು ಪ್ರಮುಖ ಸ್ಥಾನದಲ್ಲಿದ್ದು, ಇಲ್ಲಿಯ ಮಣ್ಣು ಮತ್ತು ಹವಾಮಾನ ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿದೆ. ಆದ್ದರಿಂದ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು. ಹಳ್ಳೂರಿನ ಪ್ರಗತಿಪರ ರೈತ ಲಕ್ಷ ್ಮಣ ಸಪ್ತಸಾಗರ ತಮ್ಮ ಕೃಷಿ ಅನುಭವ ಹಂಚಿಕೊಂಡರು.

ಬೆಳಗಾವಿಯ ರಾಜಪ್ರಭು ದೋತ್ರೆ ಅವರ ಸಂಗೀತ ಗೋಷ್ಠಿಯು ಜನಮೆಚ್ಚುಗೆ ಗಳಿಸಿತು. ಅವರಿಗೆ ಮುಕುಂದ ಗೋರೆ ಮತ್ತು ಅಂಗದ ದೇಸಾಯಿ ಹಾರ್ಮೋನಿಯಂ, ತಬಲಾ ಸಾಥ್‌ ನೀಡಿದರು. ಮೂಡಲಗಿಯ ಚೈತನ್ಯ ವಸತಿ ಆಶ್ರಮ ಶಾಲೆಯ ಮಕ್ಕಳು ಪ್ರದರ್ಶಿಸಿದ ಮಲ್ಲಕಂಬ, ವಿವಿಧ ಕಸರತ್ತುಗಳು ಜನರನ್ನು ರಂಜಿಸಿದವು.

ಏ. 28ರಂದು ಸಂಜೆ 7.30ಕ್ಕೆ ಜಾತ್ರಾ ಮಹೋತ್ಸವದಲ್ಲಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ