ಆ್ಯಪ್ನಗರ

ಭೀತಿ ಮೂಡಿಸಿದ್ದ ಬೃಹತ್‌ ಬಂಡೆ ತೆರವು ಕಾರ‍್ಯ ಆರಂಭ

ಗೋಕಾಕ: ನಗರದ ಮಲ್ಲಿಕಾರ್ಜುನ ...

Vijaya Karnataka 24 Oct 2019, 5:00 am
ಗೋಕಾಕ: ನಗರದ ಮಲ್ಲಿಕಾರ್ಜುನ ಗುಡ್ಡದ ಮೇಲಿಂದ ಕುಸಿಯುವ ಭೀತಿ ಮೂಡಿಸಿದ್ದ ಬೃಹತ್‌ ಬಂಡೆ ತೆರವು ಕಾರಾರ‍ಯಚರಣೆ ಬುಧವಾರ ಆರಂಭವಾಗಿದೆ. ಬಂಡೆಗೆ ಡ್ರಿಲ್‌ ಮಾಡಿ ಕೆಮಿಕಲ್‌ ಹಾಕಿ ಒಡೆಯುವ ಕೆಲಸ ಭರದಿಂದ ಸಾಗಿದ್ದು, ಗುರುವಾರ ಸಂಜೆ ವೇಳೆಗೆ ಬಂಡೆ ತೆರವು ಕಾರಾರ‍ಯಚರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Vijaya Karnataka Web 23GOK1_53


ಕಾರಾರ‍ಯಚರಣೆಯಲ್ಲಿತಾಲೂಕು ಆಡಳಿತದ ಜತೆಗೆ ಎನ್‌ಡಿಆರ್‌ಎಫ್‌ ತಂಡ, ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಸಿಬ್ಬಂದಿ ಹಾಗೂ ಎಕ್ಸ್‌ಫ್ಲೋರ್‌ ದ ಇಂಡೋರ್‌ ಕ್ಲಬ್‌ನ ಅಯೂಬಖಾನ್‌ ಪಾಲ್ಗೊಂಡಿದ್ದಾರೆ. ಬಂಡೆ ತೆರವು ಕಾರ‍್ಯ ವೀಕ್ಷಿಸಲು ಭಾರಿ ಪ್ರಮಾಣದಲ್ಲಿಜನ ಸೇರಿದ್ದಾರೆ.

ಕುಸಿಯುವ ಸಾಧ್ಯತೆ ಇರುವ ಎರಡೂ ಬಂಡೆಗಳನ್ನು ಒಡೆದು ತೆರವು ಮಾಡಲಾಗುವುದು ಎಂದು ತಹಸೀಲ್ದಾರ್‌ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ.

ಬಂಡೆ ತೆರವು ಕಾರಾರ‍ಯಚರಣೆ ಹಿನ್ನೆಲೆಯಲ್ಲಿಮುಂಜಾಗೃತೆ ಕ್ರಮವಾಗಿ ಗುಡ್ಡದ ಬುಡದಲ್ಲಿರುವ 100ಕ್ಕೂ ಹೆಚ್ಚು ಮನೆಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.

ಭಾರೀ ಮಳೆಯಿಂದ ಬೃಹತ್‌ ಬಂಡೆ ಇರುವ ಸ್ಥಳದಿಂದ ಸ್ವಲ್ಪ ವಾಲಿತ್ತು. ಇದರಿಂದ ಗುಡ್ಡದ ಬುಡದಲ್ಲಿರುವ ಜನ ಭೀತಿಗೊಂಡಿದ್ದರು. ಇದೀಗ ಬಂಡೆ ತೆರವು ಕಾರಾರ‍ಯಚರಣೆ ಆರಂಭವಾಗಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಕಾರಾರ‍ಯಚರಣೆ ವೀಕ್ಷಿಸಿದ ಸತೀಶ್‌
ಗೋಕಾಕ:
ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಬಂಡೆ ಒಡೆಯುವ ಕಾರಾರ‍ಯಚರಣೆಯನ್ನು ಶಾಸಕ ಸತೀಶ ಜಾರಕಿಹೊಳಿ ಬುಧವಾರ ಸಂಜೆ ವೀಕ್ಷಿಸಿದರು.

'ಬಂಡೆ ತೆರವು ಕಾರಾರ‍ಯಚರಣೆ ಸ್ಥಳದಲ್ಲಿಸತೀಶ್‌ ಜಾರಕಿಹೊಳಿ ಪೋಸ್ಟರ್‌ ಅಳವಡಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ' ಎಂದು ಜನರು ಆರೋಪಿಸುತ್ತಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,''ನನ್ನ ಸ್ವಂತ ಖರ್ಚಿನಲ್ಲಿಕೆಲಸ ಮಾಡಿಸುತ್ತಿದ್ದೇನೆ. ಹೀಗಿರುವಾಗ ಫೋಟೊ ಹಾಕುವುದರಲ್ಲಿತಪ್ಪೇನಿದೆ'' ಎಂದು ಸತೀಶ್‌ ಜಾರಕಿಹೊಳಿ ಮರು ಪ್ರಶ್ನೆ ಮಾಡಿದರು.

''ಸಾಮಾಜಿಕ ಕಾರ‍್ಯ ಮಾಡಲು ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಳ್ಳುತ್ತಿದ್ದೇವೆ. ಎನ್‌ಡಿಆರ್‌ಎಫ್‌ ತಂಡದೊಂದಿಗೆ ತಮ್ಮ ಸಿಬ್ಬಂದಿಯೂ ಕಾರಾರ‍ಯಚರಣೆಯಲ್ಲಿಪಾಲ್ಗೊಂಡಿದ್ದಾರೆ. ಈಗಾಗಲೇ ಒಂದು ಬಂಡೆಯನ್ನು ಒಡೆದು ಹಾಕಲಾಗಿದೆ. ನಾಳೆ ಮತ್ತೊಂದು ಬಂಡೆ ತೆರವು ಮಾಡಲಾಗುವುದು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ