ಆ್ಯಪ್ನಗರ

ವೇತನ ನೀಡಿದ ಹೊರತು ಹೋರಾಟ ನಿಲ್ಲದು

ವೇತನಕ್ಕಾಗಿ ಆಗ್ರಹಿಸಿ ಪಟ್ಟಣದ ಪಪಂ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಮುಂದುವರಿಯಿತು...

Vijaya Karnataka 16 Dec 2018, 5:00 am
ಚನ್ನಮ್ಮನ ಕಿತ್ತೂರು: ವೇತನಕ್ಕಾಗಿ ಆಗ್ರಹಿಸಿ ಪಟ್ಟಣದ ಪಪಂ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಮುಂದುವರಿಯಿತು.
Vijaya Karnataka Web BLG-1512-2-52-15KITTUR1


'ಕಾರ್ಮಿಕರ ವೇತನ ಸಮಸ್ಯೆ ಹಾಗೂ ಅವರ ಪ್ರತಿಭಟನೆಯ ಕುರಿತು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಕಲಾಪದಲ್ಲಿ ವಿಷಯ ಮಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿಯವರು ಪೌರಾಡಳಿತ ಸಚಿವರ ಜತೆ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ' ಎಂಬ ವಿಷಯವನ್ನು ಪಪಂ ಸದಸ್ಯರು ಪ್ರತಿಭಟನಾನಿರತರಿಗೆ ತಿಳಿಸಿದ್ದಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಕಾರ್ಮಿಕರ ಮುಖಂಡ ತಿಪ್ಪಣ್ಣ ಚುಳಕಿ ಅವರು 'ನಮಗೆ ಇಂಥ ಭರವಸೆಗಳು ಸಾಕಷ್ಟು ಸಿಕ್ಕವೆ. ಇಂಥ ಆಶ್ವಾಸನೆಗಳಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ. ನಮಗೆ ವೇತನ ಬೇಕು. ಅಲ್ಲಿಯವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ' ಎಂದು ಸ್ಪಷ್ಟಪಡಿಸಿದರು.

'ಕಳೆದ 15 ತಿಂಗಳಿಂದ ವೇತನವಿಲ್ಲದೆ ದುಡಿದು ನನ್ನ ಪರಿಸ್ಥಿತಿ ನೆನಪಿಸಿಕೊಂಡರೆ ಕಣ್ಣೀರು ಬರುತ್ತದೆ. ಮನೆಯಲ್ಲಿ ಅಕ್ಕಿ ಜೋಳ ಇಲ್ಲದೆ ಪರದಾಡುತ್ತಿದ್ದೇವೆ. ಮಕ್ಕಳೂ ಸಹಿತ ನಮ್ಮ ಜತೆ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗೋಳಿಗೆ ಕಣಿಕರ ಪಟ್ಟು ಸ್ಥಳದಲ್ಲೇ ಪರಿಹಾರ ನೀಡಲು ಆಗದವರ ಬರೀ ಆಶ್ವಾಸನೆಗಳನ್ನು ಕೇಳಿದರೆ ನಮ್ಮ ಹೊಟ್ಟೆ ತುಂಬುವುದು ಹೇಗೆ' ಎಂದು ನೋವಿನ ನುಡಿಗಳನ್ನು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ