ಆ್ಯಪ್ನಗರ

ಭಕ್ತಸಾಗರಕ್ಕೆ ಕೃತಾರ್ಥ ಭಾವವಿತ್ತ ಬೀರೇಶ್ವರನ ಜಾತ್ರೆ

ಯಕ್ಸಂಬಾ: ಆಕಾಶದೆತ್ತರಕ್ಕೆ ಆವರಿಸಿದ ಭಂಡಾರದ ಓಕುಳಿ ...

Vijaya Karnataka 26 Jan 2020, 5:00 am
ಯಕ್ಸಂಬಾ: ಆಕಾಶದೆತ್ತರಕ್ಕೆ ಆವರಿಸಿದ ಭಂಡಾರದ ಓಕುಳಿ.. ಜತೆಗಿಷ್ಟು ಕೆಂಪು ಗುಲಾಲು.. ಸಾಲಂಕೃತ ಪಲ್ಲಕ್ಕಿ.. ಕಣ್ಮನ ಸೆಳೆಯುವ ನಂದಿಕೋಲು ಕುಣಿತ.. ತೆಂಗನಕಾಯಿ, ಖಾರೀಕ ಹಾರಿಸಿ ಹರಕೆ ಸಲ್ಲಿಸುವ ಲಕ್ಷಾಂತರ ಭಕ್ತರು.. ಇವು ಶನಿವಾರ ವಿಜೃಂಭಣೆಯಿಂದ ನಡೆದ ಯಕ್ಸಂಬಾ ಶ್ರೀ ಬೀರೇಶ್ವರ ಜಾತ್ರೆಯಲ್ಲಿಕಂಡುಬಂದ ದೃಶ್ಯಗಳು.
Vijaya Karnataka Web 25EXA6080724
ಯಕ್ಸಂಬಾದ ಶ್ರೀ ಬೀರೇಶ್ವರ ಜಾತ್ರೆಯಲ್ಲಿನಡೆದ ಪಲ್ಲಕ್ಕಿ ಉತ್ಸವದಲ್ಲಿಪಾಲ್ಗೊಂಡ ಭಕ್ತರು.


ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ಅಥಣಿ, ಗೋಕಾಕ ಇನ್ನಿತರ ತಾಲೂಕುಗಳು ಸೇರಿದಂತೆ ಜಿಲ್ಲೆಯ ನಾನಾ ಕಡೆಗಳ ಹಾಗೂ ಮಹಾರಾಷ್ಟ್ರದ ಶಿರೋಳ, ಹಾತಕಣಗಲೆ, ಕೊಲ್ಲಾಪುರ, ಸಾಂಗಲಿ ಜಿಲ್ಲೆಗಳ ಲಕ್ಷಾಂತರ ಭಕ್ತರು ಹರಕೆ, ಸೇವೆಗಳೊಂದಿಗೆ ದೈವದರ್ಶನ ಪಡೆದು ಕೃತಾರ್ಥರಾದರು.

ಮಂದಿರದ ಮುಖ್ಯ ದ್ವಾರಕ್ಕೆ ಪ್ರತಿವರ್ಷ ತೆಂಗಿನಕಾಯಿ ಎಸೆದು ಹರಕೆ ಸಲ್ಲಿಸುವುದು ವಾಡಿಕೆಯಾಗಿದ್ದು ಅದರಂತೆ ಸಂಜೆ 5 ರಿಂದ 7 ಗಂಟೆಯವರೆಗೆ ಭಕ್ತರು ಸತತವಾಗಿ ಮಂದಿರದ ಮುಖ್ಯ ದ್ವಾರಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಎಸೆದು ಹರಕೆ ಸಲ್ಲಿಸಿದರು. ಪರಸ್ಪರ ಅರಿಶಿಣ, ಭಂಡಾರ, ಕೆಂಪು ಗುಲಾಲು ಎರಚಿಕೊಂಡು ಕುಣಿದು ಕುಪ್ಪಳಿಸಿದರು. 50 ಕ್ಕೂ ಹೆಚ್ಚು ನಂದಿಕೋಲು ಪಲ್ಲಕ್ಕಿಗಳು, 40 ಕ್ಕೂ ಹೆಚ್ಚು ಅಡ್ಡ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು.

ಬೆಳಗ್ಗೆಯಿಂದಲೇ ಜಾತ್ರೆಯಲ್ಲಿಪಾಲ್ಗೊಳ್ಳಲು ಜನರು ವಿವಿಧಡೆಯಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಗ್ರಾಮದಲ್ಲಿದೀಪಾಲಂಕಾರ, ಸ್ವಾಗತ ಬ್ಯಾನರ್‌ಗಳು, ಡಿಜಿಟಲ್‌ ಫಲಕಗಳು, ಮಕ್ಕಳ ಆಟಗಳು, ವಿವಿಧ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದವು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಅನೇಕ ಸಂಘ ಸಂಸ್ಥೆಗಳ ಸದಸ್ಯರು, ಅನೇಕ ಗಣ್ಯರು, ಊರಿನ ಪ್ರಮುಖರು ಜಾತ್ರೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ