ಆ್ಯಪ್ನಗರ

ರಾಜ್ಯ ಪುನರ್ವಿಂಗಣೆ ವೇಳೆ ಕೊಡಗಿಗೆ ಅನ್ಯಾಯ

ಪಣಜಿ: 1990ರಲ್ಲಿ ರಾಜ್ಯ ಪುನರ್ವಿಂಗಡಣೆ ನಡೆದಾಗ ಕೊಡಗಿಗೆ ಸಾಕಷ್ಟು ಅನ್ಯಾಯವಾಗಿದೆ...

Vijaya Karnataka 10 Sep 2018, 5:00 am
ಪಣಜಿ: 1990ರಲ್ಲಿ ರಾಜ್ಯ ಪುನರ್ವಿಂಗಡಣೆ ನಡೆದಾಗ ಕೊಡಗಿಗೆ ಸಾಕಷ್ಟು ಅನ್ಯಾಯವಾಗಿದೆ. ಕೊಡಗಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಗೋವಾ ಒಂದು ರಾಜ್ಯದ ಸ್ಥಾನಮಾನ ಪಡೆದು ದೇಶದಲ್ಲಿಯೇ ಹೆಸರುಮಾಡಿದೆ ಎಂದು ನಾಡೋಜ, ಡಾ. ಪಾಟೀಲ ಪುಟ್ಟಪ್ಪ ಹೇಳಿದರು.
Vijaya Karnataka Web BEL-9GOA1A


ಪಣಜಿಯ ಕಲಾ ಅಕಾಡೆಮಿಯಲ್ಲಿ ಭಾನುವಾರ ಆಯೋಜಿಸಿದ್ದ ಗೋವಾ ರಾಜ್ಯ ಕಸಾಪ ಗಡಿನಾಡು ಘಟಕದ ಉದ್ಘಾಟನಾ ಸಮಾಂರಭದಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು,

ಘಟಕ ಉದ್ಘಾಟಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ಇಂದು ಗೋವಾ ಕನ್ನಡಿಗರಿಗೆ ಅಧಿಕೃತ ವೇದಿಕೆ ಲಭಿಸಿದೆ. ಇದುವರೆಗೂ ಇಲ್ಲಿ ಕಸಾಪ ಘಟಕ ಸ್ಥಾಪನೆಯಾಗಿರಲಿಲ್ಲ. ಇಂದು ಗೋವಾ ಘಟಕದ ಅಧ್ಯಕ್ಷ ರನ್ನಾಗಿ ಮಲ್ಲಿಕಾರ್ಜುನ ಬದಾಮಿಯವರನ್ನು ಘೋಷಣೆ ಮಾಡಿದ್ದೇವೆ. 3 ಲಕ್ಷ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಅತಿದೊಡ್ಡ ಸಾಹಿತ್ಯಿಕ ಸಂಸ್ಥೆಯೆಂದರೆ ಅದುವೇ ಕನ್ನಡ ಸಾಹಿತ್ಯ ಪರಿಷತ್ತು ಎಂದರು.

ಕಸಾಪ ರಾಜ್ಯ ಸಂಚಾಲಕ ಎನ್‌.ಕೆ. ನಾರಾಯಣ ಮಾತನಾಡಿದರು. ಗೋವಾ ರಾಜ್ಯ ಕಸಾಪ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಸ್ವಾಗತಿಸಿದರು. ಕಾಂಚನಾ ಜೋಶಿ ಹಾಗೂ ಜಯಶ್ರೀ ಹೊಸ್ಮನಿ ಸಂಗಡಿಗರು ಸ್ವಾಗತಗೀತೆ ಹಾಡಿದರು. ವೀಣಾ ದೇವ್‌ ನಿರೂಪಿಸಿದರು. ಜಯಶ್ರೀ ಹೊಸಮನಿ ವಂದಿಸಿದರು. ಗೋವಾದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಿಗರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ