ಆ್ಯಪ್ನಗರ

ಚರಂಡಿಯಾಗಿ ಮಾರ್ಪಟ್ಟಿರುವ ಮುಗಳಖೋಡದ ಮುಖ್ಯ ರಸ್ತೆ

ಮುಗಳಖೋಡ: ಪಟ್ಟಣದ ಪುರಸಭೆಯ ವ್ಯಾಪ್ತಿಯ ಮಹಾಲಿಂಗಪುರ ...

Vijaya Karnataka 28 Dec 2019, 5:00 am
ಮುಗಳಖೋಡ: ಪಟ್ಟಣದ ಪುರಸಭೆಯ ವ್ಯಾಪ್ತಿಯ ಮಹಾಲಿಂಗಪುರ-ಚಿಕ್ಕೋಡಿ ಮುಖ್ಯ ರಸ್ತೆ ಮುಗಳಖೋಡ ಕ್ರಾಸ್‌ನಿಂದ ಬಿಎನ್‌ಕೆ ಪದವಿ ಮಹಾವಿದ್ಯಾಲಯದವರೆಗೆ 2.5 ಕಿಮೀ ರಸ್ತೆ ಈಗ ಚರಂಡಿಯಾಗಿ ಮಾರ್ಪಟ್ಟಿದೆ.
Vijaya Karnataka Web 27 MGKD 01071657
ಮುಗಳಖೋಡ ಪಟ್ಟಣದಲ್ಲಿ ಮುಖ್ಯರಸ್ತೆ ಚರಂಡಿಯಾಗಿ ಮಾರ್ಪಟ್ಟಿರುವುದು.


ಕೆಲವೇ ವರ್ಷಗಳ ಹಿಂದೆ 4.6 ಕೋಟಿ ವ್ಯಯಿಸಿ ಇದನ್ನು ದ್ವಿಪಥ ಮಾಡಲಾಗಿತ್ತು. ಆದರೆ ಈಗ ಭಾರತ ಪೆಟ್ರೋಲ್‌ ಬಂಕ್‌ ಬಳಿ ಹತ್ತಾರು ತಿಂಗಳುಗಳಿಂದ ಪುರಸಭೆಯ ನಲ್ಲಿನೀರು ಹಾಗೂ ಅದರ ಜತೆಗೆ ಚರಂಡಿ ನೀರು ಸೇರಿ ರಸ್ತೆಯ ಮೇಲೆ ಹರಿಯುತ್ತಿದ್ದು ಮುಖ್ಯ ರಸ್ತೆ ಚರಂಡಿಯಾಗಿ ಮಾರ್ಪಟ್ಟಿದೆ.

ಸುಕ್ಷೇತ್ರ ಶ್ರೀ ಯಲ್ಲಾಲಿಂಗ ಮಠಕ್ಕೆ ನಾನಾ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಶ್ರೀ ಯಲ್ಲಾಲಿಂಗೇಶ್ವರ ಮಠದ ದರ್ಶನಕ್ಕೆ ಬರುತ್ತಿದ್ದು ಸುತ್ತಲಿನ ಗ್ರಾಮಗಳಿಗೆ ಪ್ರಮುಖ ವ್ಯಾಪಾರ ಕೇಂದ್ರವಾದುದರಿಂದ ವ್ಯಾಪಕ ಜನ ಸಂಚಾರವಿರುತ್ತದೆ. ಪ್ರಸ್ತುತ ರಸ್ತೆ ದುರವಸ್ಥೆಯಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಸಂಚಾರಿಗಳಿಗೆ ನಿತ್ಯ ಕೊಳೆನೀರಿನ ಮಜ್ಜನವಾಗುತ್ತಿದೆ.

ಇದನ್ನು ಸರಿಪಡಿಸುವಂತೆ ನಾಗರಿಕರು ಪುರಸಭೆ ಮುಖ್ಯಾಧಿಕಾರಿಗಳಲ್ಲಿವಿನಂತಿಸಿಕೊಂಡರೂ ಪ್ರಯೋಜನವಾಗುತ್ತಿಲ್ಲ. 23 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷರಿಲ್ಲದ ಆಡಳಿತ ಇಲ್ಲಿಯದಾಗಿದೆ. ಸದ್ಯ ಅಭಿವೃದ್ಧಿ ಹೊಣೆಗಾರಿಕೆ ಅಧಿಕಾರಿಗಳದ್ದಾಗಿದ್ದು ಅವರ ನಿರ್ಲಕ್ಷ್ಯ ಜನರನ್ನು ಸಂಕಟಕ್ಕೀಡುಮಾಡಿದೆ.

ಒಳ್ಳೆಯ ಬಟ್ಟೆಬರೆ ಧರಿಸಿ ಈ ರಸ್ತೆಯಲ್ಲಿಸಂಚರಿಸುವ ಹಾಗೇ ಇಲ್ಲ. ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲಜನರ ಕೂಗು ಅರಣ್ಯರೋದನವಾಗಿರುವುದು ವಿಷಾದನೀಯ.
- ಅಶೋಕ ಕೊಪ್ಪದ, ಸ್ಥಳಿಯ ನಿವಾಸಿ.

ಕೆಲವು ತಿಂಗಳ ಹಿಂದೆ ಚರಂಡಿ ನಿರ್ಮಾಣಕ್ಕೆ ಪೂಜೆ ಮಾಡಿ 1 ಮೀಟರ್‌ನಷ್ಟು ಭೂಮಿ ಅಗೆದರು. ಆದರೆ ಮುಂದೆ ಕೆಲಸ ಪ್ರಾರಂಭವಾಗದೆ. ಸ್ಥಗಿತವಾಗಿದೆ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಚರಂಡಿ ನೀರು ನಲ್ಲಿನೀರು ಸೇರಿ ರಸ್ತೆ ಮೇಲೆ ಹರಿಯುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.
- ಪರಪ್ಪ ಖೇತಗೌಡರ, ಪುರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ