ಆ್ಯಪ್ನಗರ

ಮಾನವೀಯತೆಯ ವೈದ್ಯಕೀಯ ವೃತ್ತಿ ಇಂದಿನ ಅಗತ್ಯ

ಇಂಗಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಕೂಡ ಸೇವೆಯಾಗದೆ ವ್ಯಾವಸಾಯಿಕ ಸ್ವರೂಪ ಪಡೆಯುತ್ತಿದೆ...

Vijaya Karnataka 2 Jul 2019, 5:00 am
ಇಂಗಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಕೂಡ ಸೇವೆಯಾಗದೆ ವ್ಯಾವಸಾಯಿಕ ಸ್ವರೂಪ ಪಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಮಾನವೀಯತೆಯಿಂದ ವೈದ್ಯಕೀಯ ವೃತ್ತಿ ಮಾಡುವವರು ಇಂದಿನ ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಡಾ. ಎನ್‌.ಎ. ಮಗದುಮ್ಮ ಹೇಳಿದರು.
Vijaya Karnataka Web BEL-1INGALI2


ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೋಮಟೇಶ ಶಿಕ್ಷ ಣ ಸಂಸ್ಥೆಯ ಡಾ. ಎನ್‌.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ರಾಯಬಾಗದ ಡಾ. ವಿನೋದ ಗಸ್ತಿ ಡಾ. ವಿಶ್ವನಾಥ ಅರಳಿಕಟ್ಟಿ, ಡಾ. ಬಸವರಾಜ ಘಂಟಿ, ಲಲಿತ ಮಗದುಮ್ಮ, ಎನ್‌.ಎಸ್‌.ನಿಡಗುಂಡೆ, ಬಿ.ಆರ್‌.ಸಂಗಪ್ಪಗೋಳ, ವಿ.ಎ. ಜಾಧವ, ಭಾಗವಹಿಸಿದ್ದರು. ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ವೈದ್ಯರಾದ ಡಾ.ಸಾಮ್ರಾಟ ಪಾಟೀಲ, ಡಾ. ರಾಹುಲ್‌ ಚೌಗಲೆ, ಡಾ. ಚಿಂತಾಮಣಿ ಕಡೋಲೆಕರ, ಡಾ. ಪ್ರಮೋದಿನಿ ಚೌಗಲೆ, ಡಾ. ಕವಿತಾ ಮೈತ್ರೆಯ, ಡಾ. ಕುಲದೀಪ ಲೋಕರೆ, ಡಾ. ವಿದ್ಯಾ ಲೋಕರೆ, ಡಾ. ಎಸ್‌.ಎಸ್‌.ಮಠಪತಿ, ಡಾ. ವಿಶಾಲ ಚೌಗಲೆ, ಡಾ. ಶಾಹಿಸ್ತಾ ಜಮಾದಾರ, ಸುನೀಲ ಜನಾಜ, ಸತೀಶ ಜಾಧವ, ಬಾಹುಬಲಿ ಬನಾಜ ಹಾಗೂ ವಿದ್ಯಾರ್ಥಿ ಶಿಕ್ಷ ಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ