ಆ್ಯಪ್ನಗರ

ಪೌರತ್ವ ನೀಡುವುದೇ ಸಿಎಎ ಉದ್ದೇಶ

ಗೋಕಾಕ: ಭಾರತ ದೇಶದಲ್ಲಿ ಪೌರತ್ವ ಕಾಯ್ದೆ ...

Vijaya Karnataka 8 Jan 2020, 5:00 am
ಗೋಕಾಕ: ಭಾರತ ದೇಶದಲ್ಲಿಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ)ಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲವೆಂದು ನ್ಯಾಯವಾದಿ ಸಿದ್ದಣ್ಣ ಗೌಡರ ಹೇಳಿದರು.
Vijaya Karnataka Web 0605035GOK3_53070659
ಗೋಕಾಕದಲ್ಲಿನಡೆದ ಸಿಎಎ ಮಾಹಿತಿ ಸಭೆಯಲ್ಲಿನ್ಯಾಯವಾದಿ ಸಿದ್ದಣ್ಣ ಗೌಡರ ಮಾತನಾಡಿದರು.


ಮಂಗಳವಾರ ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿಗೋಕಾಕ ಮತಕ್ಷೇತ್ರದ ಬಿಜೆಪಿ ಹಮ್ಮಿಕೊಂಡ ಪೌರತ್ವ ಕಾಯ್ದೆ ಮಾಹಿತಿ ಸಭೆಯಲ್ಲಿಅವರು ಮಾತನಾಡಿದರು. ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಅವರು ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಯಾವ ಭಾರತೀಯರಿಗೂ ಈ ಕಾಯ್ದೆಯಿಂದ ತೊಂದರೆಯಾಗುವದಿಲ್ಲ. ಈ ಕಾಯ್ದೆಯ ಉದ್ದೇಶ ಪೌರತ್ವ ನೀಡುವುದೇ ಆಗಿದೆ. ಎಲ್ಲರೂ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಅಂಬಿರಾವ ಪಾಟೀಲ, ಎಸ್‌.ವಿ.ದೇಮಶೆಟ್ಟಿ, ವಿರೂಪಾಕ್ಷ ಯಲಿಗಾರ, ಎಸ್‌.ಎ.ಕೋತವಾಲ, ಅಬ್ಬಾಸ ದೇಸಾಯಿ, ಜ್ಯೋತಿಬಾ ಸುಭಂಜಿ, ಪ್ರಕಾಶ ಕರನಿಂಗ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ