ಆ್ಯಪ್ನಗರ

ದೇಶದಲ್ಲಿ ಜಾತ್ಯತೀತ ವ್ಯವಸ್ಥೆ ಸಂಪೂರ್ಣ ವಿಫಲ

ಖಾನಾಪುರ: ನಮ್ಮ ದೇಶದಲ್ಲಿ ಇಂದು ಜಾತಿ, ಧರ್ಮದವರಿಗೆ ಒಂದು ಬಗೆ ಮತ್ತೊಂದು ಜಾತಿ-ಧರ್ಮದವರಿಗೆ ಇನ್ನೊಂದು ಬಗೆಯ ...

Vijaya Karnataka 5 Feb 2019, 5:00 am
ಖಾನಾಪುರ : ನಮ್ಮ ದೇಶದಲ್ಲಿ ಇಂದು ಜಾತಿ, ಧರ್ಮದವರಿಗೆ ಒಂದು ಬಗೆ ಮತ್ತೊಂದು ಜಾತಿ-ಧರ್ಮದವರಿಗೆ ಇನ್ನೊಂದು ಬಗೆಯ ಕಾನೂನುಗಳು, ಸವಲತ್ತುಗಳು ಮತ್ತು ಅವಕಾಶಗಳು ಇದ್ದು, ದೇಶದಲ್ಲಿ ನಿಜವಾದ ಅರ್ಥದಲ್ಲಿ ಜಾತ್ಯತೀತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ವಿಶ್ವ ಹಿಂದು ಪರಿಷತ್‌ ಮುಖಂಡ ರಮೇಶ ಶಿಂಧೆ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web the secular system in the country is completely unsuccessful
ದೇಶದಲ್ಲಿ ಜಾತ್ಯತೀತ ವ್ಯವಸ್ಥೆ ಸಂಪೂರ್ಣ ವಿಫಲ


ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಭಾನುವಾರ ಹಿಂದು ಜನಜಾಗೃತಿ ಸಮಿತಿ, ವಿಶ್ವಹಿಂದು ಪರಿಷತ್‌, ಸನಾತನ ಸಂಸ್ಥೆ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳು ಆಯೋಜಿಸಿದ್ದ ಹಿಂದು ರಾಷ್ಟ್ರಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವನ್ನು ಮತ್ತು ಸಂಸ್ಕೃತಿಯನ್ನು ಹೊಂದಿರುವ ಹಿಂದು ಧರ್ಮವನ್ನು ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ಸರಕಾರದಿಂದಲೇ ನಡೆದಿದೆ. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯಲ್ಲಿ ಹಿಂದುಗಳನ್ನು ಹೊರತುಪಡಿಸಿ ಅನ್ಯಧರ್ಮಿಯರು ಕರ್ತವ್ಯ ನಿರ್ವಹಿಸಬಾರದು ಎಂಬ ನಿಯಮವಿದ್ದರೂ ಅನ್ಯಧರ್ಮೀಯ ಅಧಿಕಾರಿಗಳನ್ನು ನೇಮಕ ಮಾಡಿ ದೇವಸ್ಥಾನಗಳ ಮೇಲೆ ನಿಯಂತ್ರಣ ಹೇರುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸನಾತನ ಪರಂಪರೆಯನ್ನು ಹೊಂದಿರುವ ಹಿಂದು ಧರ್ಮವನ್ನು ಹಾಳುಮಾಡುವವರ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಪ್ರತಿಯೊಬ್ಬರೂ ಹಿಂದು ರಾಷ್ಟ್ರದ ಅವಶ್ಯಕತೆ ಅರಿಯುವ ಅವಶ್ಯಕತೆಯಿದೆ. ನಮ್ಮ ದೇಶದ ಉಳಿದ ಧರ್ಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಸಂಘಟಿತ ಹೋರಾಟ ನಡೆಸಿವೆ. ಆದರೆ ಹಿಂದುಸ್ತಾನದ ಹಿಂದುಗಳನ್ನು ಒಡೆದು ಆಳುವ ನೀತಿಯನ್ನು ನಮ್ಮ ರಾಜಕಾರಣಿಗಳು ನಡೆಸಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದರು.

ಸಮಯ ಮೀಸಲಿಡಿ: ಮುಸ್ಲಿಮರು ವಾರದ ಒಂದು ದಿನ ಕಡ್ಡಾಯವಾಗಿ ಮಸೀದಿಗೆ ಮತ್ತು ಕ್ರಿಶ್ಚಿಯನ್ನರು ವಾರದ ಒಂದು ದಿನ ಕಡ್ಡಾಯವಾಗಿ ಚರ್ಚ್‌ಗೆ ಹೋಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಹಿಂದುಗಳಾದ ನಾವು ಒಂದೆಡೆ ಸೇರಿ ನಮ್ಮ ಧರ್ಮ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸಲು ಮನಸ್ಸು ಮಾಡುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ವಾರಕ್ಕೊಂದು ದಿನದ ಒಂದು ಗಂಟೆ ಸಮಯವನ್ನು ಧರ್ಮಕ್ಕಾಗಿ ಎಲ್ಲರೂ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ