ಆ್ಯಪ್ನಗರ

ರೋಮಾಂಚನಗೊಳಿಸಿದ ಜೋಡಿತ್ತಿನ ಗಾಡಿ ಶರ್ಯತ್ತು

ಚಿಕ್ಕೋಡಿ : ತಾಲೂಕಿನ ಮುಗಳಿ ಗ್ರಾಮದಲ್ಲಿ ಮಾರುತಿ ದೇವರ ಕಾರ್ತಿಕ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಎತ್ತುಗಳ ...

Vijaya Karnataka 18 Dec 2018, 5:00 am
ಚಿಕ್ಕೋಡಿ : ತಾಲೂಕಿನ ಮುಗಳಿ ಗ್ರಾಮದಲ್ಲಿ ಮಾರುತಿ ದೇವರ ಕಾರ್ತಿಕ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಎತ್ತುಗಳ ರೋಮಾಂಚನಕಾರಿ ಓಟ ವೀಕ್ಷಕರ ಗಮನ ಸೆಳೆಯಿತು.
Vijaya Karnataka Web BEL-17CKD3


ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಕಾಗಲ್‌ನ ಓಂಕಾರ ಕಲಗೊಂಡಾ ಪಾಟೀಲ (ಪ್ರಥಮ), ದತ್ತವಾಡದ ಸತೀಶ ಅಪ್ಪು ನೇಜ (ದ್ವಿತೀಯ) ಹಾಗೂ ಅಮ್ಮಣಗಿಯ ಅಪ್ಪು ಭೀಮಪ್ಪಾ ಹುದ್ದಾರ (ತೃತೀಯ), ಜೋಡು ಕುದುರೆ ಗಾಡಿ ಶರ್ಯತ್ತಿನಲ್ಲಿ ಅತ್ಯಾಳದ ಮಹಾದೇವ ಕಳಸಣ್ಣವರ (ಪ್ರಥಮ), ಹಾಲಟ್ಟಿಯ ಬಸವರಾಜ ಧಾಮಣ್ಣವರ (ದ್ವಿತೀಯ), ಹಾಗೂ ಬೆಳಕೂಡದ ಕಿರಣ ದೊಡಮನಿ ಇವರ ಕುದುರೆ ಗಾಡಿ (ತೃತೀಯ) ಸ್ಥಾನ ಪಡೆದವು.

ಶನಿವಾರ ಬೆಳಗ್ಗೆ ಮಾರುತಿ ದೇವರಿಗೆ ಅಭಿಷೇಕ, ನಂತರ ದೇವರ ಪಲ್ಲಕ್ಕಿ ಹಾಗೂ ಅಂಬಲಿ ಕೊಡಗಳ ಉತ್ಸವ ಸಕಲ ವಾದ್ಯಮೇಳದೊಂದಿಗೆ ನಡೆಯಿತು. ಸಂಜೆ ಮಾರುತಿ ದೇವರ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ ನರಗುಂದ ತಾಲೂಕಿನ ಕೊಣ್ಣೂರಿನ ಜೈ ಕಿಸಾನ ಸಾಂಸ್ಕೃತಿಕ ಜಾನಪದ ಕಲಾ ಸಂಘದ ಕಲಾವಿದರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.

ಗ್ರಾಪಂ ಮಾಜಿ ಅಧ್ಯಕ್ಷ ತಮ್ಮಣ್ಣಾ ಬಂಬಲವಾಡಿ, ರಾಜು ಪಾಟೀಲ, ಈರಗೌಡ ಪಾಟೀಲ, ಮಾರುತಿ ಕಳಸಣ್ಣವರ, ರಾಮಪ್ಪ ಮದಿಹಳ್ಳಿ, ವಿರೂಪಾಕ್ಷಿ ಕೊಟಬಾಗಿ, ಅಣ್ಣಾಸಾಬ ಪಾಟೀಲ, ಅಣ್ಣಪ್ಪ ಕಳಸಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ