ಆ್ಯಪ್ನಗರ

ತಕ್ಷಣ ತೊಗರಿ ಖರೀದಿ ಕೇಂದ್ರ ತೆರೆಯಲು ಆಗ್ರಹ

ತೆಲಸಂಗ: ರೈತರ ಹಿತದೃಷ್ಟಿಯಿಂದ ತಕ್ಷಣ ತೊಗರಿ ಖರೀದಿ ...

Vijaya Karnataka 11 Jan 2020, 5:00 am
ತೆಲಸಂಗ: ರೈತರ ಹಿತದೃಷ್ಟಿಯಿಂದ ತಕ್ಷಣ ತೊಗರಿ ಖರೀದಿ ಕೇಂದ್ರ ಆರಂಭಿಸದಿದ್ದರೆ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಗಜಾನನ ಮಂಗಸೂಳಿ ಎಚ್ಚರಿಸಿದ್ದಾರೆ.
Vijaya Karnataka Web 10TELSANG3_53
ತೆಲಸಂಗ ಗ್ರಾಮದಲ್ಲಿಕಾಂಗ್ರೆಸ್‌ ಮುಖಂಡರಿಂದ ನಡೆದ ಸುದ್ದಿಗೋಷ್ಠಿಯಲ್ಲಿಕಾಂಗ್ರೆಸ್‌ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು.


ಗ್ರಾಮದಲ್ಲಿಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆಕೊಟ್ಟ ಏಕೈಕ ಸರಕಾರ' ಎಂದು ಹೇಳಿಕೊಳ್ಳುವ ಮೋದಿಯವರು, ತಮ್ಮದೆ ಸರಕಾರವಿರುವ ರಾಜ್ಯದಲ್ಲಿತೊಗರಿ ಬೆಂಬಲ ಬೆಲೆ ಖರೀದಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲಎಂದು ಟೀಕಿಸಿದರು.

ತೆಲಸಂಗ ಹೋಬಳಿಯಲ್ಲಿತೊಗರಿ ರೈತರ ಸಂಜೀವಿನಿಯಾಗಿದೆ. ಇಷ್ಟೊತ್ತಿಗೆ ರೈತರ ತೊಗರಿ ಖರೀದಿಯಾಗಬೇಕಿತ್ತು. ಆರ್ಥಿಕ ತೊಂದರೆಯಿಂದ ರೈತರ ತೊಗರಿ ದಲ್ಲಾಳಿಗಳ ಪಾಲಾಗುತ್ತಿದೆ. ಸರಕಾರ ರೈತರ ಹಿತ ಕಾಯುವಲ್ಲಿಸಂಪೂರ್ಣ ವಿಫಲವಾಗಿದೆ.

ಈ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ಕಾಶಿನಾಥ ಕುಂಬಾರಕರ್‌, ಕಾಂಗ್ರೆಸ್‌ ಮುಖಂಡರಾದ ಐ.ಜಿ. ಉಂಡೋಡಿ, ಸುರೇಶ ಖೊಳಂಬಿ, ಅಶೋಕ ಉಂಡೋಡಿ, ಅಪ್ಪು ಜಮಾದರ, ರವಿ ಕವಟಗಿ, ಧರೆಪ್ಪ ಮಾಳಿ ಇನ್ನಿತರರು ಇದ್ದರು.

ರೈತ ಬೆಳೆದ ಎಲ್ಲತೊಗರಿ ಖರೀದಿಸಿ:
ಕಳೆದಬಾರಿ ಖರೀದಿಸಿದ ಬೆಲೆಯನ್ನು ಪ್ರಸಕ್ತ ವರ್ಷವೂ ನೀಡುತ್ತಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ರೈತನೋರ್ವನಿಂದ 10 ಕ್ವಿಂಟಲ್‌ ಖರೀದಿಸುವ ಪ್ರಮಾಣ ನಿಗದಿ ಮಾಡಿದೆ. ಇದರಿಂದ ರೈತನ ಗತಿ ದಲ್ಲಾಳಿಗಳ ಬಾಗಿಲು ಕಾಯುವಂತಾಗುತ್ತದೆ. ಕನಿಷ್ಠ ಕ್ವಿಂಟಲವೊಂದಕ್ಕೆ 8 ಸಾವಿರ ರೂ. ಬೆಲೆ ಕೊಡಬೇಕು. ಅಲ್ಲದೆ ರೈತ ಬೆಳೆದ ಎಲ್ಲತೊಗರಿ ಬೆಳೆ ಖರೀದಿಸುವ ನಿಯಮ ತಕ್ಷಣದಿಂದ ಜಾರಿಯಾಗಬೇಕು. ವಿಳಂಬ ಮಾಡಿದರೆ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿಹೋರಾಟ ಆರಂಭಿಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಗಜಾನನ ಮಂಗಸೂಳಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ