ಆ್ಯಪ್ನಗರ

ಕೇರಳದಿಂದ ಬಂದ ವ್ಯಕ್ತಿ ಕೆಮ್ಮಿದ್ದಕ್ಕೆ ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು!

ಬೆಳಗಾವಿ: ಕೇರಳದಿಂದ ಬಂದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದಕ್ಕೆ ...

Vijaya Karnataka 13 Mar 2020, 5:00 am
ಬೆಳಗಾವಿ: ಕೇರಳದಿಂದ ಬಂದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದಕ್ಕೆ ಹೆದರಿದ ಗ್ರಾಮಸ್ಥರು ಆತನನ್ನು ಗುರುವಾರ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಬಳಿಕ ವಾಪಸ್‌ ಕರೆದುಕೊಂಡು ಹೋಗಿದ್ದಾರೆ!
Vijaya Karnataka Web the villagers brought the man from kerala to the hospital for cough
ಕೇರಳದಿಂದ ಬಂದ ವ್ಯಕ್ತಿ ಕೆಮ್ಮಿದ್ದಕ್ಕೆ ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು!


''ಆತನಲ್ಲಿ ಕೊರೊನಾ ಲಕ್ಷಣ ಇಲ್ಲ. ಸಾಮಾನ್ಯ ಜ್ವರ, ಶೀತ, ಕೆಮ್ಮು ಮಾತ್ರ. ಕೊರೊನಾ ಇದೆ ಎನ್ನುವುದು ಸುಳ್ಳು'', ಎಂದು ಆರೋಗ್ಯ ಇಲಾಖೆ ಜಿಲ್ಲಾಸರ್ವೇಕ್ಷಣೆ ಅಧಿಕಾರಿ ಡಿ.ಬಿ. ತುಕ್ಕಾರ ತಿಳಿಸಿದ್ದಾರೆ.

ಆಗಿದ್ದೇನು?: ತಾಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬ ಕೇರಳದಿಂದ ಈಚೆಗೆ ಮರಳಿದ್ದ. ಆತನಲ್ಲಿಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಅಷ್ಟಕ್ಕೇ ಅಲ್ಲಿನ ಸಿಬ್ಬಂದಿ ಕೊರೊನಾ ಎಂದು ಶಂಕಿಸಿ ಜಿಲ್ಲಾಸ್ಪತ್ರೆಗೆ ಹೋಗಲು ಹೇಳಿದ್ದರು. ಭಯಗೊಂಡ ಗ್ರಾಮಸ್ಥರು ಆತನನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ''ತಪಾಸಣೆ ನಡೆಸಿದ ವೈದ್ಯರು ಕೊರೊನಾ ಲಕ್ಷಣ ಇಲ್ಲ'', ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಬಿಮ್ಸ… ನಿರ್ದೇಶಕ ವಿನಯ್‌ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ