ಆ್ಯಪ್ನಗರ

ಪಂಚಗಂಗಾ ಪ್ರವಾಹದಲ್ಲಿ ಕೊಚ್ಚಿಹೋದ ಯುವಕ

ಇಚಲಕರಂಜಿ: ಕೊಲ್ಲಾಪುರ ಜಿಲ್ಲೆಯಲ್ಲಿ ಗುರುವಾರ ಮಳೆ ಸ್ವಲ್ಪ ವಿಶ್ರಾಂತಿ ಪಡೆದರೂ ಪಂಚಗಂಗಾ ನದಿ ನೀರಿನ ಮಟ್ಟ 44 ಅಡಿ ...

Vijaya Karnataka 20 Jul 2018, 5:00 am
ಇಚಲಕರಂಜಿ: ಕೊಲ್ಲಾಪುರ ಜಿಲ್ಲೆಯಲ್ಲಿ ಗುರುವಾರ ಮಳೆ ಸ್ವಲ್ಪ ವಿಶ್ರಾಂತಿ ಪಡೆದರೂ ಪಂಚಗಂಗಾ ನದಿ ನೀರಿನ ಮಟ್ಟ 44 ಅಡಿ ದಾಟಿದ್ದರಿಂದ ಜಿಲ್ಲಾ ಆಡಳಿತ ಹಾಗೂ ನಗರಪಾಲಿಕೆ ಪ್ರವಾಹ ಪ್ರದೇಶದಲ್ಲಿಯ ಒಟ್ಟು 90 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಜಿಲ್ಲೆಯ ರುಯಿ, ಇಂಗಳಿ, ಇಚಲಕರಂಜಿ ಹಾಗೂ ಕುರುಂದವಾಡ ಮೊದಲಾದೆಡೆಯ 250ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
Vijaya Karnataka Web the young man in the flood of panchganga
ಪಂಚಗಂಗಾ ಪ್ರವಾಹದಲ್ಲಿ ಕೊಚ್ಚಿಹೋದ ಯುವಕ


ಜಿಲ್ಲೆಯ ನಾಗಾವ ಸೇತುವೆಯ ಪ್ರವಾಹಕ್ಕೆ ಕಿಶನ್‌ ಎಂಬ ಯುವಕ ಕೊಚ್ಚಿಹೋಗಿದ್ದು ಗುರುವಾರ ಮಧ್ಯಾಹ್ನ ಆತನ ಮೃತದೇಹ ದೊರೆತಿದೆ. ಅದೇ ರೀತಿ ಟೋಲ್‌ನಾಕಾ ಹತ್ತಿರದ ಪ್ರವಾಹದಲ್ಲಿ ಸಿಲುಕಿದ ಕಾರ್‌ ಚಾಲಕನೊಂದಿಗೆ ಇಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರಯಾಗಚಿಕಲಿಯ ತರುಣ ಶಿವಾಜಿ ಮಹಾದೇವ ಪಾಟೀಲ ಎಂಬಾತನನ್ನು ನಾಗರಿಕರು ಹಾಗೂ ಪ್ರವಾಹ ನಿಯಂತ್ರಣ ಜವಾನರು ರಕ್ಷಿಸಿದ್ದಾರೆ.

ಜಿಲ್ಲೆಯ 85 ಸೇತುವೆಗಳು ಸಂಪೂರ್ಣ ಮುಳುಗಿದ್ದು ಅನ್ಯಮಾರ್ಗದಿಂದ ವಾಹನ ಸಂಚಾರ ಪ್ರಾರಂಭಿಸಲಾಗಿದೆ. ಕೊಲ್ಲಾಪುರ-ರತ್ನಾಗಿರಿ, ಕೊಲ್ಲಾಪುರ-ಗಗನಬಾವಡಾ ಸೇರಿ 10 ರಾಜ್ಯಮಾರ್ಗ, 28ಕ್ಕೂ ಅಧಿಕ ಜಿಲ್ಲಾ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಇಚಲಕರಂಜಿಯಲ್ಲೂ ಪಂಚಗಂಗಾ ನದಿ ನೀರಿನ ಮಟ್ಟ ಏರಿದ್ದರಿಂದ ಸ್ವಾಮಿ ಸಮರ್ಥನಗರ, ಮರುಗುಬಾಯಿ ಮಂದಿರ ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿದೆ. ಕುರುಂದವಾಡ ಗ್ರಾಮದಲ್ಲಿಯ ವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿಯ 9 ಕುಟುಂಬಗಳ 39 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 2 ಮನೆಗಳು ಕುಸಿದಿದ್ದು ಯಾವುದೇ ಜೀವಹಾನಿಯಾಗಿಲ್ಲ. ನರಸಿಂಹವಾಡಿಯ ದತ್ತಮಂದಿರ ಸಂಪೂರ್ಣ ಮುಳುಗಡೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ