ಆ್ಯಪ್ನಗರ

ಆರೋಗ್ಯ ಸೇವೆಗಳ ದರ, ನಿರ್ವಹಣೆಗೆ ಪ್ರತ್ಯೇಕ ಸಮಿತಿ ಇಲ್ಲ

ಆಯುಷ್ಮಾನ್‌ ಭಾರತ್‌ ಮತ್ತು ಪ್ರಧಾನ್‌ಮಂತ್ರಿ ಜನ್‌ ಆರೋಗ್ಯ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆಗಳ ದರ ಹಾಗೂ ನಿರ್ವಹಣೆಗಾಗಿ ಕೇಂದ್ರದ ಆರೋಗ್ಯ ಸೇವೆಗಳ

Vijaya Karnataka 25 Jul 2019, 5:00 am
ಬೆಳಗಾವಿ: ಆಯುಷ್ಮಾನ್‌ ಭಾರತ್‌ ಮತ್ತು ಪ್ರಧಾನ್‌ಮಂತ್ರಿ ಜನ್‌ ಆರೋಗ್ಯ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆಗಳ ದರ ಹಾಗೂ ನಿರ್ವಹಣೆಗಾಗಿ ಕೇಂದ್ರದ ಆರೋಗ್ಯ ಸೇವೆಗಳ ಇಲಾಖೆ ಮತ್ತು ವಿವಿಧ ಆಸ್ಪತ್ರೆಗಳಿಂದ ಸಂಗ್ರಹಿಸಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿರುವುದರಿಂದ ಪ್ರತ್ಯೇಕ ಸಮಿತಿ ರಚನೆ ಮಾಡಿಲ್ಲ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವ ಅಶ್ಚಿನಿಕುಮಾರ ಚೌಬೆ ಹೇಳಿದ್ದಾರೆ.
Vijaya Karnataka Web kore


ರಾಜ್ಯಸಭೆಯಲ್ಲಿ ಡಾ.ಪ್ರಭಾಕರ ಕೋರೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ''ಕೇಂದ್ರದ ಆರೋಗ್ಯ ಸೇವೆಗಳ ನಿರ್ದೇಶನಾಲಯ, ನೀತಿ ಆಯೋಗ, ಏಮ್ಸ್‌ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಿಂದ ಸಲಹೆ ಮತ್ತು ವರದಿ ಪಡೆದುಕೊಂಡ ನಂತರವೇ ಆರೋಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದಾಗ್ಯೂ, ಆಯುಷ್ಮಾನ್‌ ಭಾರತ್‌ ಮತ್ತು ಪ್ರಧಾನಮಂತ್ರಿ ಜನ್‌ ಆರೋಗ್ಯ ಯೋಜನೆ ಸೇವೆಗಳ ಪ್ಯಾಕೇಜ್‌ ದರವನ್ನು ಶೇ.10ರಷ್ಟು ಹೆಚ್ಚಿಸಲು ಅಥವಾ ಇಳಿಕೆ ಮಾಡಲು ಆಯಾ ರಾಜ್ಯಗಳಿಗೆ ಅಧಿಕಾರ ನೀಡÜಲಾಗಿದೆ. ಆಯಾ ರಾಜ್ಯಗಳಲ್ಲಿನ ರೋಗಿಗಳ ಸಂಖ್ಯೆ ಮತ್ತು ಅಲ್ಲಿನ ಜಿಲ್ಲೆಗಳ ಬೇಡಿಕೆಗೆ ಅನುಗುಣವಾಗಿ ಕೇಂದ್ರ ನಿಗದಿ ಮಾಡಿರುವ ಆರೋಗ್ಯ ಸೇವೆಗಳ ಪ್ಯಾಕೇಜ್‌ ದರಗಳನ್ನು ಶೇ.10ರಷ್ಟು ಬದಲಾವಣೆ ಮಾಡಿಕೊಳ್ಳಬಹುದು'', ಎಂದರು.

ಎಲೆಕ್ಟ್ರಿಕಲ್‌ ವಾಹನ ಬಳಕೆ ಜಾರಿಗೆ ಪ್ರಸ್ತಾವ
2023 ಮಾ.31ರಿಂದ ಲಿಥಿಯಂ ಅಯಾನ್‌ ಅಥವಾ ಸುಧಾರಿತ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕಲ್‌ ತ್ರೀ ವೀಲರ್‌ ವಾಹನ ಬಳಕೆ ಜಾರಿಗೆ 2019ರ ಮೇ 14 ರಂದು ನೀತಿ ಆಯೋಗದ ಸಭೆ ಪ್ರಸ್ತಾವ ಸಲ್ಲಿಸದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವರು ಉತ್ತರ ನೀಡಿದ್ದಾರೆ. ಎಲೆಕ್ಟ್ರಿಕಲ್‌ ವಾಹನ ಬಳಕೆ ಮತ್ತು 150ಸಿಸಿ ಸಾಮರ್ಥ್ಯ‌ಕ್ಕಿಂತ ಕಡಿಮೆ ಇರುವ ದ್ವಿಚಕ್ರ ವಾಹನ ನಿಷೇಧಕ್ಕೆ ಸಂಬಂಧಿಸಿದಂತೆ ಸರಕಾರದ ಮುಂದಿರುವ ಪ್ರಸ್ತಾವ ಕುರಿತು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, 2025ರ ಮಾ. 31ರ ನಂತರ ಕಡ್ಡಾಯವಾಗಿ ಲಿಥಿಯಂ ಬ್ಯಾಟರಿ ಹೊಂದಿರುವ 150ಸಿಸಿ ಸಾಮರ್ಥ್ಯ‌ದ ಎಲೆಕ್ಟ್ರಿಕಲ್‌ ದ್ವಿಚಕ್ರ ವಾಹನಗಳ ಮಾರಾಟ ಮಾಡಬೇಕು ಎಂದು ನೀತಿ ಆಯೋಗ ಪ್ರಸ್ತಾವ ಸಲ್ಲಿಸಿದೆ. ಬರುವ ದಿನಗಳಲ್ಲಿ ಸಂಬಂಧಿಸಿದ ವಾಹನ ಉತ್ಪದಕ ಕಂಪನಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ