ಆ್ಯಪ್ನಗರ

ಶೇತಕರಿ ಪ್ಯಾನಲ್‌ನ 13 ಸದಸ್ಯರಿಗೆ ಅಧಿಕ ಮತಗಳ ಜಯ

ಕಾಗವಾಡ: ಮಲ್ಟಿಸ್ಟೇಟ್‌ ಕಾಯಿದೆ ಅನುಗುಣವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ...

Vijaya Karnataka 23 Aug 2019, 5:00 am
ಕಾಗವಾಡ: ಮಲ್ಟಿಸ್ಟೇಟ್‌ ಕಾಯಿದೆ ಅನುಗುಣವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಸದಸ್ಯರನ್ನು ಒಳಗೊಂಡ ಸಾಂಗಲಿ ಜಿಲ್ಲೆಯ ಕವಟೆಮಂಕಾಳದ ಶ್ರೀ ಮಹಾಕಾಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪಂಚವಾರ್ಷಿಕ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷೆ ಅನಿತಾ ಸಗರೆ ನೇತೃತ್ವದ ಶೇತಕರಿ ಪ್ಯಾನಲ್‌ನ 13 ಅಭ್ಯರ್ಥಿಗಳು ಅಧಿಕ ಮತಗಳಿಂದ ವಿಜಯಶಾಲಿಯಾದರು.
Vijaya Karnataka Web BEL-22 KAGWAD 4 NEWS PHOTO


ಸಕ್ಕರೆ ಕಾರ್ಖಾನೆಯ ಸಂಚಾಲಕ ಮಂಡಳದ ಚುನಾವಣೆ ಮಂಗಳವಾರ ಜರುಗಿತು. ಚುನಾವಣಾಧಿಕಾರಿ, ನ್ಯಾಯವಾದಿ ಅಭಿಜಿತ್‌ ಪರಮಾರೆಯವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.

ಅನಿತಾ ವಿಜಯ ಸಗರೆ, ದೀಪಕ ಒಲೆಕರ, ಜೀವನರಾವ ಭೋಸಲೆ, ಮೋಹನ ಖೋತ, ಅಪ್ಪಾಸಾಹೇಬ ಕೋಳೆಕರ, ಕಾಶಿಲಿಂಗ ಕೋಳೆಕರ, ಮನೋಹರ ಪಾಟೀಲ, ಗಜೇಂದ್ರ ಪಾಟೀಲ, ಸಂಜಯ ಪಾಟೀಲ, ಸುಹಾಸ ಪಾಟೀಲ, ಹನಮಂತ ಶಿಂಧೆ, ಸುರಗೌಡಾ ಪಾಟೀಲ, ಆದಗೌಡಾ ಬಂಡಗರ ಅವರು ಸುಮಾರು 5 ಸಾವಿರ ಮತಗಳ ಅಂತರದಿಂದ ವಿಜಯಶಾಲಿಯಾದರು. 4 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಅನಿತಾ ಸಗರೆಯವರ ಗುಂಪಿನ ನೂತನ ಸಂಚಾಲಕರು, ಮತ್ತು ಗಣಪತಿ ಸಗರೆ, ಸಂತುನಭೈಯ್ಯಾ ಸಗರೆ, ಸೇರಿದಂತೆ ಅನೇಕರು ವಿಜಯೋತ್ಸವ ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ