ಆ್ಯಪ್ನಗರ

ನದಿ ತೀರದ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ

ಚಿಕ್ಕೋಡಿ: ನದಿ ತೀರದ ಜನರಿಗೆ ಶಾಶ್ವತ ಪರಿಹಾರ ...

Vijaya Karnataka 30 Oct 2019, 5:00 am
ಚಿಕ್ಕೋಡಿ: ನದಿ ತೀರದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿಸರಕಾರ ಚಿಂತನೆ ನಡೆಸಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.
Vijaya Karnataka Web 29CKD1_53


ಪಟ್ಟಣದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಜನಧನ ಯೋಜನೆಯ ಖಾತೆಯಿಂದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಅನುಕೂಲವಾಗಿದೆ. ಸರಕಾರ ಮನೆ ಮತ್ತು ಬೆಳೆ ಹಾನಿಯ ಪರಿಹಾರವನ್ನು ನೇರವಾಗಿ ಆ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತಿದೆ. ಅಲ್ಲದೇ ಪ್ರವಾಹ ಪೀಡಿತ ಪ್ರದೇಶದ ಜನರೊಂದಿಗೆ ಸರಕಾರವಿದ್ದು, ನದಿ ತೀರದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲಎಂದು ಅವರು ಹೇಳಿದರು.

ಪಟ್ಟಣದಲ್ಲಿರುವ ಗುರುವಾರ ಪೇಠೆ ರಸ್ತೆಯ ಅಗಲೀಕರಣಕ್ಕಾಗಿ ಪಟ್ಟಣದ ಎಲ್ಲವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮತ್ತೊಮ್ಮೆ ಜನರೊಂದಿಗೆ ಚರ್ಚೆ ಮಾಡಿ ಜನರ ಸಹಕಾರ ಪಡೆದು ಸರಕಾರದಿಂದ ಹೆಚ್ಚುವರಿ ಅನುದಾನ ತಂದು ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ಅಕ್ರಮ ಅರ್ಕಾಟೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ