ಆ್ಯಪ್ನಗರ

ಬಾಕಿ ಪಾವತಿಸದಿದ್ದರೆ ಶ್ರೀಮಂತ ಪಾಟೀಲ ಮನೆ ಎದುರು ಆತ್ಮಹತ್ಯೆ ಎಚ್ಚರಿಕೆ

ಅಥಣಿ ಫಾರ್ಮರ್ರ್ಸ್‌ ಕಾರ್ಖಾನೆ ವಿರುದ್ಧ 'ಮಹಾ' ರೈತರ ಪ್ರತಿಭಟನೆ..

Vijaya Karnataka 12 Nov 2018, 5:00 am
ಐನಾಪುರ: ಅಥಣಿ ಫಾರ್ಮರ್ರ್ಸ್‌ ಸಕ್ಕರೆ ಕಾರ್ಖಾನೆ ಕಳೆದ ಹಂಗಾಮಿನಲ್ಲಿ ನುರಿಸಿದ ಕಬ್ಬಿನ ಬಾಕಿ ಹಣವನ್ನು ಶೀಘ್ರ ನೀಡಬೇಕೆಂದು ಒತ್ತಾಯಿಸಿ ಕಾರ್ಖಾನೆ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಸಾಂಗ್ಲಿ ನಿವಾಸಿದ ಎದುರು ರೈತ ಮುಖಂಡ ಶರದ್‌ ಜೋಷಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
Vijaya Karnataka Web BEL-11-AINAPUR-3


ಪ್ರತಿಭಟನೆ ನಿರತ ರೈತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆ ಘೋಷಿಸಿದ ದರ ನೀಡದಿದ್ದರೆ ಶ್ರೀಮಂತ ಪಾಟೀಲ ಅವರ ಮನೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಸಿದರು.

ರೈತ ಸಂಘಟನೆ ಕಾರ್ಯದರ್ಶಿ ಸುನೀಲ ಫರಾಟೆ ಮಾತನಾಡಿ, ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಒಬ್ಬರಿಗೆ ಒಂದೊಂದು ರೀತಿ ದರ ನೀಡಲಾಗಿದೆ. ಘೋಷಣೆ ಮಾಡಿದಂತೆ ಪ್ರತಿ ಟನ್‌ ಕಬ್ಬಿಗೆ 2900 ರೂ. ದರ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ಹಂಗಾಮಿನಲ್ಲಿ ಘೋಷಿಸಿದ ದರ ನೀಡದಿದ್ದರೆ ಈ ಬಾರಿ ಮಹಾರಾಷ್ಟ್ರ ಭಾಗದಿಂದ ಒಂದು ತುಂಡು ಕಬ್ಬನ್ನೂ ಪೂರೈಸುವುದಿಲ್ಲ ಎಂದು ಘೋಷಿಸಿದರು.

ರಾಜೇಂದ್ರ ಯಾದವ, ರಾವ್‌ಸಾಹೇಬ ದಳವಿ, ಸರ್ಜಿರಾವ್‌ ಯಾದವ, ವಸಂತರಾವ ಬಿಸೆ, ಸಚಿನ್‌ ತೋಡಕರ, ಶಂಕರ ಕಾಪಸೆ, ಪ್ರಭಾಕರ ಗುರವ, ಉತ್ತಮ ಯಾದವ, ನವನಾಥ ಪೋಳ, ರಾಮಚಂದ್ರ ಕನಸೆ, ವಿಕಾಸ ಪವಾರ,ವಿಜಯ ಯಾದವ, ಸೇರಿದಂತೆ ಸಾಂಗ್ಲಿ ಜಿಲ್ಲೆಯ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ