ಆ್ಯಪ್ನಗರ

ಶಾಶ್ವತ ಕುಡಿವ ನೀರಿಗಾಗಿ ಇಂದು ಅಥಣಿ ಬಂದ್‌

ಅಥಣಿ: ಕೃಷ್ಣಾ ನದಿಗೆ ನೀರು ಹರಿಸುವಂತೆ ಮತ್ತು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕೃಷ್ಣಾ ನದಿ ನೀರು ಹೋರಾಟ ಸಮಿತಿ ಹಾಗೂ ...

Vijaya Karnataka 20 May 2019, 5:00 am
ಅಥಣಿ : ಕೃಷ್ಣಾ ನದಿಗೆ ನೀರು ಹರಿಸುವಂತೆ ಮತ್ತು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕೃಷ್ಣಾ ನದಿ ನೀರು ಹೋರಾಟ ಸಮಿತಿ ಹಾಗೂ 40ಕ್ಕೂ ಸಂಘಟನೆಗಳ ವತಿಯಿಂದ ಅಥಣಿ ಬಂದ್‌ ಕರೆ ನೀಡಲಾಗಿದೆ ಎಂದು ಸಮಿತಿಯ ಬಸನಗೌಡಾ ಪಾಟೀಲ ಮತ್ತು ವಿಜಯಕುಮಾರ ಅಡಹಳ್ಳಿ ತಿಳಿಸಿದರು.
Vijaya Karnataka Web today athani bandh demanding permanent drinking water
ಶಾಶ್ವತ ಕುಡಿವ ನೀರಿಗಾಗಿ ಇಂದು ಅಥಣಿ ಬಂದ್‌


ಅವರು ಭಾನುವಾರ ಸಿಪಿಐಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು. ಬೆಳಗ್ಗೆ ಸ್ಥಳೀಯ ಸಿದ್ಧೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಂಬೇಡ್ಕರ ವೃತ್ತದ ಮೂಲಕ ಫಾಸಿ ಕಟ್ಟೆಗೆ ತಲುಪಿ ಸಮಾರೋಪಗೊಳ್ಳಲಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎ. ವನಜೋಳಿ, ರಮೇಶ ಸಿಂದಗಿ, ಎಸ್‌.ಎಸ್‌. ಪಾಟೀಲ, ಪ್ರಕಾಶ ಕಾಂಬಳೆ, ಮಹೇಂದ್ರ ರಾಜಿಂಗಳೆ, ವಿನಾಯಕ ಬಿ.ಜೆ, ಪಂಡೀತ ನೂಲಿ, ಪ್ರಶಾಂತ ತೋಡ್ಕರ, ಬಸವರಾಜ ಕಾಂಬಳೆ, ಮಹಾಂತೇಶ ಬಾಡಗಿ, ಜಗನಾಥ ಬಾಮನೆ, ಚಿದಾನಂದ ಸೇಗುಣಸಿ, ಸುನೀಲ ನಾಯಿಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ