ಆ್ಯಪ್ನಗರ

ಇಂದು ಸವದತ್ತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸವದತ್ತಿ: ತಾಲೂಕಿನ ಯರಝರ್ವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ...

Vijaya Karnataka 31 May 2019, 5:00 am
ಸವದತ್ತಿ: ತಾಲೂಕಿನ ಯರಝರ್ವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 31ರಂದು ಸವದತ್ತಿ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
Vijaya Karnataka Web today the savadatti taluk 6th kannada sahitya sammelan
ಇಂದು ಸವದತ್ತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ


ಯರಝರ್ವಿ ಗ್ರಾಮದ ಬಿ.ಬಿ. ಮಮದಾಪುರ ಮಾರ್ಗ, ಬಾಳಪ್ಪ ಹುಕ್ಕೇರಿ ಮುಖ್ಯದ್ವಾರದ ಹಾಗೂ ಕವಿ ಎಸ್‌.ಡಿ. ಇಂಚಲ ವೇದಿಕೆಯಲ್ಲಿ ನಡೆಯುವ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಎಸ್‌.ಎಸ್‌. ಇಂಚಲ ಅವರ ಸಮ್ಮೇಳನಾಧ್ಯಕ್ಷ ತೆಯಲ್ಲಿ ಕಾರ್ಯಕ್ರಮಗಳು ನೆರವೇರಲಿವೆ.

ಅಂದು ಬೆಳಗ್ಗೆ 9 ಗಂಟೆಗೆ ಯರಝರ್ವಿ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ರಾಮಲಿಂಗಪ್ಪ ಹೂಗಾರ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡ ಧ್ವಜಾರೋಹಣ ಹಾಗೂ ಸವದತ್ತಿ ತಾಲೂಕು ಕಸಾಪ ಅಧ್ಯಕ್ಷ ಸಿ.ಬಿ. ದೊಡಗೌಡರ ಪರಿಷತ್ತಿನ ಧ್ವಜಾರೋಹಣ ಮಾಡುವರು.

ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಘೋಡಗೇರಿ ಶಿವಾನಂದಮಠದ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಆನಂದ ಮಾಮನಿ ಉದ್ಘಾಟಿಸಲಿದ್ದಾರೆ. ಡಾ. ಎಸ್‌.ಎಸ್‌. ಅಂಗಡಿ ಸಮ್ಮೇಳನಾಧ್ಯಕ್ಷ ತೆ ವಹಿಸುವರು.

ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ ಅವರು ಯ.ರು. ಪಾಟೀಲ ರಚಿಸಿದ 'ರುದ್ರಸರ್ಜನ ಪ್ರಣಯ ಪ್ರಸಂಗ', 'ಸಾಹೇಬ್ರ ನಾಯಿ ಮತ್ತು ಹತ್ತು ಕಥೆಗಳು', 'ಬೆಳಗಾವಿ ಆಳಿದ ರಾಣಿಯರು ಮತ್ತು ಇತರ ಲೇಖನಗಳು' ಹಾಗೂ ಐ.ಜೆ.ಅಂಬಲಿ ಮತ್ತು ಮಹೇಶ ಶಿರಸಂಗಿ ಅವರು ರಚಿಸಿದ ಸಿರಿಗನ್ನಡ ಕನ್ನಡ ವ್ಯಾಕರಣ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಗ್ರಾಪಂ ಅಧ್ಯಕ್ಷೆ ಶಾಂತವ್ವ ಜಕಬಾಳ ಅಧ್ಯಕ್ಷ ತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲ ಮೆಟಗುಡ್ಡ ಆಶಯ ನುಡಿಗಳನ್ನು ಆಡಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಯ.ರು. ಪಾಟೀಲ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ ದೇಮಪ್ಪಲಿಂಗರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಜಿಪಂ ಸದಸ್ಯರಾದ ಅಜಿತಕುಮಾರ ದೇಸಾಯಿ, ಎಂ.ಎಸ್‌. ಹಿರೇಕುಂಬಿ, ತಾಪಂ ಸದಸ್ಯರಾದ ಬಸವರಾಜ ಮುತ್ತೆನ್ನವರ, ಮಂಜುಳಾ ಕರಿಗೊನ್ನವರ, ತಹಸೀಲ್ದಾರ ಅರುಣ ಹೂಗಾರ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ನಡೆಯುವ ಕವಿ ಗೋಷ್ಠಿಯಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಶಿವಪ್ರಸಾದ ಹುಲೆಪ್ಪನವರಮಠ ಆಶಯನುಡಿಗಳನ್ನಾಡಲಿದ್ದಾರೆ. ಕವಿಗಳಾದ ಡಾ. ವೈ.ಎಂ. ಯಾಕೊಳ್ಳಿ, ವಿಠ್ಠಲ ದಳವಿ, ಅನುಸೂಯಾ ಕಿಟದಾಳ, ನಾಗೇಶ ನಾಯಕ, ಬಿ.ಕೆ. ಹೊಂಗಲ, ದೇವೇಂದ್ರಪ್ಪ ಕಮ್ಮಾರ, ವೀರಣ್ಣ ಕೊಳಕಿ, ರಮೇಶ ಮುರಂಕರ, ಶ್ರೀಧರ ಆಸಂಗಿಹಾಳ, ಜಯಂತಿ ರೇವಡಿ, ಪ್ರೇಮಾ ಯಾಕೊಳ್ಳಿ, ಜಯಶ್ರೀ ಕುಲಕರ್ಣಿ, ಭಾಗೀರಥಿ ಪಟ್ಟೇದ, ಲಕ್ಷ್ಮೀ ಆರಿಬೆಂಚಿ, ಎ.ಪಿ.ಲಂಬೂನವರ, ಎಸ್‌.ಎಮ್‌.ವಾರೆಪ್ಪನವರ, ಬಾಳು ಹೊಸಮನಿ, ಇಬ್ರಾಹಿಂ ಚಾಂದಖಾನವರ, ಫಕ್ರುಸಾಬ ಜಾಬಣ್ಣವರ, ಬಿ.ಬಿ. ಹುಲಗೊಪ್ಪ, ಬಿ.ಎಸ್‌. ಬೆಟ್ಟದ, ಜಗದೀಶ ಗೊರಾಬಾಳ, ಸಿ.ವೈ. ಹೊಸಮನಿ, ಸೋಮು ಮಲ್ಲೂರ, ಸಿದ್ದಪ್ಪ ಕಟಿಗೆಣ್ಣವರ, ಎಸ್‌.ಎಂ. ಸತ್ಯಪ್ಪನವರ, ರಾಘವೇಂದ್ರ ದೇಸಾಯಿ, ಐ.ಜಿ. ಅಂಬಲಿ, ಮಹೇಶ ಶಿರಸಂಗಿ, ಸಂತೋಷ ಹುಬ್ಬಳ್ಳಿ, ಕೆ.ಬಿ. ಮಲಗೌಡರ, ವೈ.ಬಿ. ಕಡಕೋಳ, ಸುಧೀರ ವಾಘೇರಿ, ನಾಗಪ್ಪ ಹೊನ್ನಳ್ಳಿ, ಎಂ.ಸಿ. ಬಾಂಡೇಕರ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ಡಾ. ವೈ.ಬಿ. ಹಿಮ್ಮಡಿ ಅಧ್ಯಕ್ಷ ತೆ ವಹಿಸುವರು. ಡಾ. ಸುರೇಶ ಹನಗಂಡಿ ಉಪನ್ಯಾಸ ನೀಡುವರು.

ಸಂಜೆ 4.30ಕ್ಕೆ ನಡೆಯುವ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಯರಝರ್ವಿ ಯಲ್ಲಾಲಿಂಗ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸವದತ್ತಿ ತಾಲೂಕು ಕಸಾಪ ಅಧ್ಯಕ್ಷ ಸಿ.ಬಿ. ದೊಡಗೌಡರ ಅಧ್ಯಕ್ಷ ತೆ ವಹಿಸುವರು. ಡಾ. ಸಂಗಮನಾಥ ಲೋಕಾಪುರ ಸಮಾರೋಪ ಭಾಷಣ ಮಾಡಲಿದ್ದು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಜಗದೀಶ ಶಿಂತ್ರಿ, ಗ್ರೇಡ-2 ತಹಸೀಲ್ದಾರ್‌, ಎಂ.ಎನ್‌. ಮಠದ, ಬಿಇಒ ಕೇಶವ ಪೆಟ್ಲೂರ, ಕಥೆಗಾರ ಹೂಲಿ ಶೇಖರ, ಕಾದಂಬರಿಕಾರ ಸುಬ್ರಾವ ಕುಲಕರ್ಣಿ, ವಿದ್ವಾಂಸ ಡಾ. ಎಸ್‌.ಎಸ್‌. ಜಕಬಾಳ, ಪಿಡಿಒ ವಿ.ಎಂ. ಪೂಜೇರ ಭಾಗವಹಿಸಲಿದ್ದಾರೆ. ನಂತರ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ