ಆ್ಯಪ್ನಗರ

ಇಂದಿನ ಜಡಿಸಿದ್ದೇಶ್ವರ ಮಠದ ಜಾತ್ರೆ ರದ್ದು

ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದ ...

Vijaya Karnataka 12 Apr 2020, 5:00 am
ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಮಠದಲ್ಲಿಏ.12ರಂದು ನಡೆಯಬೇಕಿದ್ದ ಯೋಗೇಂದ್ರರ ಹಗ್ಗರಹಿತ ರಥೋತ್ಸವ ರದ್ದು ಪಡಿಸಲಾಗಿದ್ದು, ಜಾತ್ರೆಯ ಹೆಸರಿನಲ್ಲಿಅಂದು ಯಾರಾದರೂ ಹೊರಗೆ ಬಂದರೆ ಕೇಸ್‌ ದಾಖಲಿಸಲಾಗುವುದು ಎಂದು ಕುಲಗೋಡ ಠಾಣೆಯ ಪಿಎಸ್‌ಐ ಎಚ್‌.ಕೆ. ನರಳೆ ಹೇಳಿದರು.
Vijaya Karnataka Web todays jadisiddeshwara fair cancelled
ಇಂದಿನ ಜಡಿಸಿದ್ದೇಶ್ವರ ಮಠದ ಜಾತ್ರೆ ರದ್ದು


ತಾಲೂಕಿನ ಸುಣಧೋಳಿ ಗ್ರಾಮದ ಶ್ರೀ ಮಠದಲ್ಲಿಶುಕ್ರವಾರ ಹಮ್ಮಿಕೊಳ್ಳಲಾದ ಪ್ರಮುಖರ ಸಭೆಯಲ್ಲಿಅವರು ಮಾತನಾಡಿದರು.

ಮಠದಲ್ಲಿಪೊಲೀಸ್‌ ಬಂದೋಬಸ್ತು ಮಾಡಲಾಗಿದೆ. ಮಠಕ್ಕೆ ಬಂದು ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಿಷೇಧಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಮಾತನಾಡಿ, ಜನರ ಹಿತದೃಷ್ಟಿಯಿಂದ ರಥೋತ್ಸವ ರದ್ದು ಮಾಡಲಾಗಿದೆ. ಬರುವ ವರ್ಷ ನಾವೆಲ್ಲರೂ ಸೇರಿ ಅದ್ಧೂರಿಯಾಗಿ ಜಾತ್ರೆ ಆಚರಿಸೋಣ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ