ಆ್ಯಪ್ನಗರ

ವೇತನ ಪಾವತಿಗಾಗಿ ಪಪಂ ಸಿಬ್ಬಂದಿ ಧರಣಿ

ಐನಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ 15 ತಿಂಗಳ ವೇತನ ಬಾರದ ಹಿನ್ನೆಲೆಯಲ್ಲಿ ಕಾರಣ ಹಠಾತ್‌ ಅನಿರ್ದಿಷ್ಟಾವಧಿ ಧರಣಿ ...

Vijaya Karnataka 21 Dec 2018, 5:00 am
ಐನಾಪುರ : ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ 15 ತಿಂಗಳ ವೇತನ ಬಾರದ ಹಿನ್ನೆಲೆಯಲ್ಲಿ ಕಾರಣ ಹಠಾತ್‌ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
Vijaya Karnataka Web BEL-20 AINAPUR 01


2011ರ ಜನಗಣತಿ ಆಧಾರದಲ್ಲಿ ಐನಾಪುರ ಗ್ರಾಪಂನ್ನು 2015-16 ನೇ ಸಾಲಿನಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆ ಪಂಚಾಯಿತಿಯಲ್ಲಿ ಠರಾವು ಮೂಲಕ ನೇಮಕಗೊಂಡು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆಯಾಗದಿರುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರ ವೇತನವನ್ನು ಸ್ಥಳೀಯ ಸಾಮಾನ್ಯ ನಿಧಿಯಲ್ಲಿ ಪಾವತಿಸಲು ಕಳೆದ ಫೆ. 28 ರ 25 ನೇ ಸಾಮಾನ್ಯ ಸಭೆಯಲ್ಲಿ ಠರಾವು ಕೈಗೊಂಡು ಆಗಸ್ಟ್‌ 2017ರವರೆಗೆ ವೇತನ ನೀಡಿದ್ದಾರೆ.

ಆದರೆ ಈಗ ಸೆಪ್ಟೆಂಬರ 2017 ರಿಂದ ಇಲ್ಲಿಯವರೆಗೆ 16 ತಿಂಗಳ ವೇತನ್ನು ಪಾವತಿಸಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಕಸ ವಿಲೇವಾರಿ, ಸ್ವಚ್ಛತೆ, ನೀರು ಬಿಡುವುದು ಸೇರಿದಂತೆ ಎಲ್ಲ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರು ಬಡವರಿದ್ದು ಈ ಕೆಲಸದಿಂದಲೇ ಜೀವನ ನಿರ್ವಹಣೆ ಮಾಡುತ್ತಾರೆ. ಆದರೆ ಕಳೆದ 15 ತಿಂಗಳುಗಳಿಂದ ವೇತನವಿಲ್ಲದೆ ಜೀವನ ನಡೆಸುತ್ತಿರುವುದು ದುರ್ದೈವ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಜಯ ಸನದಿ, ಮಹೇಶ ನಡುವಿನಮನಿ, ಬಸವರಾಜ ಪಾಟೀಲ, ಸಂತೋಷ ಕೋಳಿ, ಸಂಜು ನಿರ್ವಾಣಿ, ಶಿದರಾಯ ತಳಕೇರಿ, ಆನಂದ ಐಹೊಳಿ, ರವಿ ತಳಕೇರಿ, ಛಾಯಾ ಬಡಿಗೇರ, ಸುರೇಖಾ ಕಾಂಬಳೆ, ಮಹಾದೇವಿ ನಡೋಣಿ, ಪವಿತ್ರಾ ನಡೋಣಿ, ಸುರೇಖಾ ಕಾಂಬಳೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಪೌರ ಕಾರ್ಮಿಕರು ಮುಷ್ಕರ ನಡೆಸಿದ ಪರಿಣಾಮ ಪಟ್ಟಣದಲ್ಲಿ ಸ್ವಚ್ಛತೆ ಕಾರ್ಯ ಮಾಡುವವರಿಲ್ಲದೆ ತ್ಯಾಜ್ಯ ಹಾಗೂ ಕಸ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿದೆ. ಕಸ ವಿಲೇವಾರಿ ಆಗದೆ ರಸ್ತೆಗಳೆಲ್ಲ ಗಬ್ಬೆಂದು ನಾರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ