ಆ್ಯಪ್ನಗರ

ನಯಾನಗರ ಸೇತುವೆ ಮೇಲೆ ಟ್ರಾಫಿಕ್‌ ಜಾಮ್‌

ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ದುರಸ್ತಿ ಕಾಮಗಾರಿ ...

Vijaya Karnataka 20 Aug 2018, 5:00 am
ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ದುರಸ್ತಿ ಕಾಮಗಾರಿ ಮಂದಗತಿಯಿಂದ ಸಾಗಿದ್ದರಿಂದ ಭಾನುವಾರ ನೂರಾರು ವಾಹನಗಳು, ಚಾಲಕರು ಸೇತುವೆ ಮೇಲೆ ಎರಡು ಗಂಟೆಗಳ ಕಾಲ ಸಾಲು ಗಟ್ಟಿ ನಿಂತು ತೊಂದರೆ ಅನುಭವಿಸಿದರು.
Vijaya Karnataka Web traffic jam on the nayanagar bridge
ನಯಾನಗರ ಸೇತುವೆ ಮೇಲೆ ಟ್ರಾಫಿಕ್‌ ಜಾಮ್‌


ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದಿಂದ ಹೊರಟ ಬಸ್‌, ಖಾಸಗಿ ವಾಹನ, ದ್ವಿಚಕ್ರ ವಾಹನ ಸವಾರರು, ಮಲ್ಲಮ್ಮನ ಬೆಳವಡಿಯಿಂದ ನಯಾನಗರ ಗ್ರಾಮದ ಸೇತುವೆ ಮೇಲೆ ಸಾಗುತ್ತಿದ್ದ ಲಾರಿ, ಟ್ರ್ಯಾಕ್ಟರ್‌, ಟೆಂಪೋ, ಗೂಡ್ಸ್‌ ವಾಹನ ಚಾಲಕರು ಸೇತುವೆ ಮೇಲೆ ನಡೆದಿರುವ ದುರಸ್ತಿ ಕಾಮಗಾರಿಯಿಂದ ಕಿರಿಕಿರಿ ಅನುಭವಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು, ಪೊಲೀಸ್‌ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಆಮೆಗತಿಯ ಸೇತುವೆ ದುರಸ್ತಿ ಕಾರ್ಯಕ್ಕೆ ಎಲ್ಲರೂ ಬೇಸರ ವ್ಯಕ್ತಪಡಿಸಿದರು. ನಯಾನಗರ ಮಲಪ್ರಭಾ ನದಿ ಸೇತುವೆ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಹದಗೆಟ್ಟ ಸೇತುವೆ ರಸ್ತೆಯನ್ನು ಡಾಂಬರೀಕಣಗೊಳಿಸಬೇಕು. ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ