ಆ್ಯಪ್ನಗರ

ಶೀಘ್ರವೇ ಇಚಲಕರಂಜಿಗೆ ರೈಲು ಓಡಾಟ

ಇಚಲಕರಂಜಿ: ಪೊಲೀಸರ ರಕ್ಷಣೆಯಲ್ಲಿ ಹಾತಕಣಂಗಲೆಯಿಂದ ಇಚಲಕರಂಜಿವರೆಗಿನ 8 ಕಿಮೀ ಅಂತರದ ...

Vijaya Karnataka 2 Sep 2018, 5:00 am
ಇಚಲಕರಂಜಿ: ಪೊಲೀಸರ ರಕ್ಷಣೆಯಲ್ಲಿ ಹಾತಕಣಂಗಲೆಯಿಂದ ಇಚಲಕರಂಜಿವರೆಗಿನ 8 ಕಿಮೀ ಅಂತರದ ರೈಲು ಮಾರ್ಗದ ಸಮೀಕ್ಷಾ ಕಾರ್ಯವನ್ನು ಶನಿವಾರ ಪೂರ್ಣಗೊಳಿಸಲಾಯಿತು.
Vijaya Karnataka Web BEL-1ICH4


ಯೋಜನೆಯಿಂದ ಕೋರುಚಿ, ಕಬನೂರ ಗ್ರಾಮದಲ್ಲಿಯ ಕೆಲ ರೈತರ ಗದ್ದೆ, ಮನೆಗಳು ನೆಲಸಮವಾಗಲಿರುವುದರಿಂದ ರೈತರು ಸರ್ವೇ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಅಲ್ಲದೆ ತಮಗೆ ಹಾನಿಯಾಗಲಿದೆ ಎಂದು ಆಗ್ರಹಿಸಿ ಕಳೆದ ಎರಡು ತಿಂಗಳಿಂದ ಸರ್ವೇ ಕಾಮಗಾರಿಗೆ ವಿರೋಧಿಸುತ್ತ ಬಂದಿದ್ದರು. ಆದರೆ ಕೇಂದ್ರ ಸರಕಾರದ ಈ ಯೋಜನೆಯ ಕುರಿತು ಮನವರಿಕೆ ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು ಶನಿವಾರ ನಡೆದ ರೈಲು ಮಾರ್ಗದ ಸರ್ವೇ ನಿರಾತಂಕವಾಗಿ ಪೂರ್ಣಗೊಂಡಿದೆ ಎಂದು ಸರ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಮಗ್ಗಗಳ ನಗರ ಇಚಲಕರಂಜಿಯ ಬಟ್ಟೆ ವ್ಯವಸಾಯ ಸೇರಿದಂತೆ ಅನೇಕ ವ್ಯವಹಾರ,ಸಾರಿಗೆ,ಹಾಗೂ ವ್ಯಾಪಾರಗೊಸ್ಕರ ಕರ್ನಾಟಕ,ಆಂದ್ರ,ಗೋವಾ,ಹಾಗೂ ಗುಜರಾತ ಸೇರಿದಂತ ಇತರೇ ರಾಜ್ಯಗಳ ಸಂಪರ್ಕದ ಅನುಕೂಲಕ್ಕಾಗಿ ರೈಲು ಸಂಚಾರ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರ ಹಾತಕಣಂಗಲೆಯಿಂದ ಇಚಲಕರಂಜಿವರೆಗಿನ 8 ಕಿಮೀ ಉದ್ದದ ಮಾರ್ಗಕ್ಕೆ ಮಂಜೂರಿ ನೀಡಿತ್ತು. ಇದಕ್ಕಾಗಿ ಅನುದಾನವನ್ನೂ ನೀಡಲಾಗಿತ್ತು. ಆದರೆ ವಿರೋಧದಿಂದಾಗಿ ಸರ್ವೇ ಕಾರ್ಯ ಸ್ಥಗಿತಗೊಂಡಿತ್ತು.

ಶನಿವಾರ ಪೊಲೀಸ್‌ ರಕ್ಷಣೆಯಲ್ಲಿ ಕಬನೂರ,ಮಗದುಮ್ಮ ತೋಟ,ಅಲಾಯನ್ಸ್‌ ಆಸ್ಪತ್ರೆ,ಹಾಗೂ ಚಂದೂರವರೆಗಿನ 8 ಕಿಮೀ ಅಂತರದ ಸರ್ವೇಕಾಮಗಾರಿ ಪೂರ್ಣಗೊಳಿಸಲಾಯಿತು. ಸರ್ವೇ ಸಮಯದಲ್ಲಿ ಎತ್ತರ ಕಟ್ಟಡಗಳು, ಸರ್ವೇ ಸ್ಥಳಗಳಲ್ಲಿ ದೂರದರ್ಶಿ ಯಂತ್ರಗಳು, ದಿಕ್ಕು ತೋರುವ ಯಂತ್ರಗಳು, ಹಾಗೂ ಧ್ವಜಗಳನ್ನು ಹಚ್ಚಿ ಸರ್ವೇ ನಡೆಸಲಾಯಿತು. ಸರ್ವೇಕಾಮಗಾರಿಯ ವೇಳೆಗೆ ಪೊಲೀಸ್‌ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ