ಆ್ಯಪ್ನಗರ

ರೈತರ ಒತ್ತಾಯದ ಮೇರೆಗೆ ಕೊನೆಗೂ ಹರಿಯಿತು ಕರಿಮಸೂತಿ ಕಾಲುವೆಗೆ ನೀರು

ಅಥಣಿ: ರೈತರ ಒತ್ತಾಯದ ಮೇರೆಗೆ ತಾಲೂಕಿನ ಪೂರ್ವ ಭಾಗದ ...

Vijaya Karnataka 24 Jun 2020, 5:00 am
ಅಥಣಿ: ರೈತರ ಒತ್ತಾಯದ ಮೇರೆಗೆ ತಾಲೂಕಿನ ಪೂರ್ವ ಭಾಗದ ಕರಿಮಸೂತಿ ಏತ ನೀರಾವರಿಯ ಸಾವಳಗಿ- ತುಂಗಳ ಕಾಲುವೆಗಳಿಗೆ ಮಂಗಳವಾರ ನೀರು ಹರಿಸಲಾಗಿದೆ.
Vijaya Karnataka Web 21-ATHANI-1-A_53
ಸಾವಳಗಿ- ತುಂಗಳ ಕಾಲುವೆಗಳಿಗೆ ಮಂಗಳವಾರ ನೀರು ಹರಿಸಿರುವುದು.


2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಕಾಲುವೆಗಳ ಮೂಲಕ ನೀರು ಹರಿಸುವ ಕಾರ್ಯಕ್ಕೆ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಬಿ.ಎಸ್‌.ಚಂದ್ರಶೇಖರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರೈತರ ಬಹುನಿರೀಕ್ಷಿತ ಹಲ್ಯಾಳ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವ ಕಾರ್ಯ ಪ್ರತಿ ವರ್ಷಕ್ಕಿಂತ ಈ ವರ್ಷ 10ದಿನ ಮುಂಚಿತವಾಗಿ ನೆರವೇರಿಸಲಾಗಿದೆ. ರೈತರು ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ಅನಧಿಕೃತ ಪಂಪ್‌ಸೆಟ್‌ಗಳ ಮೂಲಕ ನೀರು ಹರಿಸಬಾರದು. ಎಲ್ಲರೂ ಸಮನಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಸಹಕಾರದಿಂದ ವರ್ತಿಸಬೇಕು ಎಂದರು.

ರೈತ ಮುಖಂಡ ಮಹಾದೇವ ಮಡಿವಾಳ, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕೆ.ಕೆ.ಜಾಲಿಬೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ. ರವಿ, ಸಹಾಯಕ ಅಭಿಯಂತರರಾದ ಪ್ರವೀಣ ಹುಣಸಿಕಟ್ಟಿ, ಬಸವರಾಜ ಗಲಗಲಿ, ಗುತ್ತಿಗೆದಾರ ವಿಕ್ರಂ ಭೋಸಲೆ ಮತ್ತಿತರರು ಇದ್ದರು.ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದ ತಾಲೂಕಿನ ಪೂರ್ವಭಾಗದ ಕರಿಮಸೂತಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಕಸಕಡ್ಡಿಗಳಿಂದ ತುಂಬಿಕೊಂಡಿದ್ದ ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಬಿಡಲಾಗಿದೆ. ಸುಮಾರು 35ಸಾವಿರ ಹೆಕ್ಟೇರ್‌ ಪ್ರದೇಶ, ಅಂದರೆ ಅಂದಾಜು 70ಸಾವಿರ ಎಕರೆ ಜಮೀನಿಗೆ ಈ ನೀರಾವರಿ ಸೌಲಭ್ಯ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ