ಆ್ಯಪ್ನಗರ

ಹೊಸವಂಟಮೂರಿ ಗ್ರಾಪಂ ಅಧ್ಯಕ್ಷ ರ ಅವಿರೋಧ ಆಯ್ಕೆ

ಯಮಕನಮರಡಿ: ಹೊಸವಂಟಮೂರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುಕ್ಕಪ್ಪಾ ಪಕ್ಕಾಲಿ ಅವಿರೋಧ ಆಯ್ಕೆಯಾಗಿದ್ದಾರೆ...

Vijaya Karnataka 18 Jun 2019, 5:00 am
ಯಮಕನಮರಡಿ: ಹೊಸವಂಟಮೂರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುಕ್ಕಪ್ಪಾ ಪಕ್ಕಾಲಿ ಅವಿರೋಧ ಆಯ್ಕೆಯಾಗಿದ್ದಾರೆ.
Vijaya Karnataka Web BEL-17YMD1


ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಪ್ಪ ವಣ್ಣೂರಿ ಅವರ ವಿರುದ್ಧ ಅವಿಶ್ವಾಸ ಮಂಡನೆಯಾಗಿದ್ದರಿಂದ ಹಾಗೂ ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಚುನಾವಣೆ ಘೋಷಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಾಡ್‌ 2ರ ಸದಸ್ಯ ಸುಕ್ಕಪ್ಪಾ ಪಕ್ಕಾಲಿ ಒಬ್ಬರೇ ನಾಮಪತ್ರ ಮಾತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.

ಗ್ರಾಪಂನ 32ಸದಸ್ಯರ ಪೈಕಿ 27ಸದಸ್ಯರು ಅಧ್ಯಕ್ಷ ರ ಆಯ್ಕೆ ಸಂದರ್ಭದಲ್ಲಿ ಹಾಜರಿದ್ದರು ಎಂದು ಚುನಾವಣಾಧಿಕಾರಿ ಬಿ.ಆರ್‌. ಖಾನಾಪುರಿ ಮಾಹಿತಿ ನೀಡಿದರು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಂದರ್ಭದಲ್ಲಿ ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ, ಚಿಕ್ಕೋಡಿ ವಿಭಾಗದ ಕಾಂಗ್ರೆಸ್‌ಎಸ್‌ಟಿ ಘಟಕದ ಅಧ್ಯಕ್ಷ ರಾಮಾಣ್ಣ ಗುಳ್ಳಿ, ಭೂತರಾಮನಹಟ್ಟಿ ಪಿಕೆಪಿಎಸ್‌ ಅಧ್ಯಕ್ಷ ಮಾರುತಿ ಚೌಗಲಾ, ಕೆಡಿಪಿ ಸದಸ್ಯ ಅಶೋಕ ಪಾಟೀಲ, ಲಕ್ಷ ್ಮಣ ನಾಯಿಕ, ಲಕ್ಷ ್ಮಣ ಕಾಟಾಬಳಿ, ಸುರೇಶ ತಿರಗು ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ