ಆ್ಯಪ್ನಗರ

ಬಸ್‌ ನಿಲ್ದಾಣ ಸಂಪರ್ಕಕ್ಕೆ ಅಂಡರ್‌ಪಾಸ್‌

ಬೆಳಗಾವಿ: ನಗರ ಬಸ್‌ ನಿಲ್ದಾಣ (ಸಿಬಿಟಿ) ಮತ್ತು ಕೇಂದ್ರ ...

Vijaya Karnataka 4 Jan 2020, 5:00 am
ಬೆಳಗಾವಿ: ನಗರ ಬಸ್‌ ನಿಲ್ದಾಣ (ಸಿಬಿಟಿ) ಮತ್ತು ಕೇಂದ್ರ ಬಸ್‌ ನಿಲ್ದಾಣದ ನಡುವೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಸಂಚರಿಸಲು ಅನುಕೂಲವಾಗುವಂತೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಕೆಳ ಸೇತುವೆ (ಅಂಡರ್‌ ಪಾಸ್‌) ನಿರ್ಮಾಣಗೊಳ್ಳಲಿದೆ.
Vijaya Karnataka Web 3RAJU-1033622
ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅಧ್ಯಕ್ಷತೆಯಲ್ಲಿಶುಕ್ರವಾರ ಅಧಿಕಾರಿಗಳ ಸಭೆ ನಡೆಯಿತು.


ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅಧ್ಯಕ್ಷತೆಯಲ್ಲಿಶುಕ್ರವಾರ ಕಂಟೋನ್ಮೆಂಟ್‌ ಸಿಇಒ, ಟ್ರಾಫಿಕ್‌ ಎಸಿಪಿ ಮತ್ತು ಪಾಲಿಕೆ ಅಧಿಕಾರಿಗಳ ಉಪಸ್ಥಿತಿಯಲ್ಲಿನಡೆದ ಸಭೆಯಲ್ಲಿಈ ಕುರಿತು ಚರ್ಚಿಸಲಾಯಿತು.

ಅಂಡರ್‌ ಪಾಸ್‌ ಕಾಮಗಾರಿ ಆರಂಭಿಸಿದರೆ ಎದುರಾಗುವ ಸಮಸ್ಯೆಗಳು, ನಿವಾರಣೆ ಕ್ರಮ, ಕೆಳ ಸೇತುವೆ ನಿರ್ಮಾಣವಾಗುವವರೆಗೂ ಬಸ್‌ ಮತ್ತು ಜನಸಂಚಾರ ವ್ಯವಸ್ಥೆ, ವಿದ್ಯುತ್‌ ಕಂಬಗಳ ಸ್ಥಳಾಂತರ ಇತರ ಸಂಗತಿಗಳ ಕುರಿತು ಚರ್ಚಿಸಲಾಯಿತು.

ಸಭೆಯ ನಂತರ ಅಧಿಕಾರಿಗಳು ಕೆಳ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಿಡಿಸಿಸಿ ಬ್ಯಾಂಕ್‌ ಎದುರಿಗಿನ ಹಳೇ ಪಿಬಿ ರಸ್ತೆ ಮತ್ತು ಹಳೆ ಭಾಜಿ ಮಾರ್ಕೆಟ್‌ನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆಯಲ್ಲಿಈಗ ನಡೆದಿರುವ ಕಾಮಗಾರಿಗಳು ಪೂರ್ಣಗೊಂಡು ಸಂಚಾರಕ್ಕೆ ಮುಕ್ತಾಯವಾಗುತ್ತಿದ್ದಂತೆ ಕೆಳ ಸೇತುವೆ ಕೆಲಸ ಆರಂಭಿಸಲು ತೀರ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ