ಆ್ಯಪ್ನಗರ

ಮಹಿಳೆಯರಿಗೆ ವೇದಮಾತಾ ಪ್ರಶಸ್ತಿ ಪ್ರದಾನ

ಬೆಳಗಾವಿ : ಮಹಿಳೆಯನ್ನು ಧಾರ್ಮಿಕವಾಗಿ ಬೆಳೆಸಿದರೆ ಆ ಮನೆ ...

Vijaya Karnataka 8 Jul 2019, 5:00 am
ಬೆಳಗಾವಿ : ಮಹಿಳೆಯನ್ನು ಧಾರ್ಮಿಕವಾಗಿ ಬೆಳೆಸಿದರೆ ಆ ಮನೆ ಸಂಸ್ಕಾರಯುತವಾಗಿರುತ್ತದೆ. ಇದರಿಂದ ಇಡೀ ಸಮಾಜ ಆರೋಗ್ಯಯುತ ಬೆಳವಣಿಗೆ ಕಾಣುತ್ತದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
Vijaya Karnataka Web BLG-0707-2-52-7RAJU-10


ಇಲ್ಲಿನ ಲಕ್ಷ್ಮೇಟೇಕ್‌ನಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶ್ರೀಮಠದಿಂದ ವೇದ ತರಬೇತಿಗೊಂಡ ಮಹಿಳೆಯರಿಗೆ ವೇದಮಾತಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಮಹಿಳೆಗೆ ದೇಶದ ಹಣಕಾಸು ಸಚಿವ ಸ್ಥಾನ ನೀಡಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಅದರಂತೆ ಮಹಿಳೆಗೆ ವೇದ ಕಲಿಸಿದ ಶ್ರೇಯಸ್ಸು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಶ್ರೀಮಠದಿಂದ 500 ಮಹಿಳೆಯರಿಗೆ ವೇದ ತರಬೇತಿ ನೀಡಿರುವುದು ದೊಡ್ಡ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪ್ರಕಾಶ ಬಾಗೋಜಿ ಮಾತನಾಡಿ, ಈ ಕಾರ್ಯಕ್ರಮ ಮಾದರಿಯಾಗಿದೆ. ಮಹಿಳೆಗೆ ವೇದ, ಸಂಸ್ಕೃತ, ಜ್ಯೋತಿಷ್ಯವನ್ನು ಕಲಿಸಿದರೆ ಮನೆ ನಂದಗೋಕುಲವಾಗುತ್ತದೆ. ವಿಶ್ವವಿದ್ಯಾಲಯ ಮಾಡಬೇಕಿರುವ ಕೆಲಸವನ್ನು ಶ್ರೀಮಠ ಮಾಡಿದೆ ಎಂದು ಶ್ಲಾಘಿಸಿದರು. ಪಿ.ಜಿ. ಹುಣಶ್ಯಾಳದ ನಿಜಗುಣ ದೇವರು ಮಾತನಾಡಿ, ಹುಕ್ಕೇರಿ ಶ್ರೀಗಳ ಕೆಲಸದ ಬಗ್ಗೆ ಹೊಗಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೇದ ಮಾತೆಯರನ್ನು ತಯಾರಿಸಿದ ಕೀರ್ತಿ ಧಾರವಾಡದ ಕವಿತಾ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದರು.

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಹುಕ್ಕೇರಿ ಹಿರೇಮಠ ಸಂಯುಕ್ತವಾಗಿ ಮಹಿಳೆಯರಿಗೆ ಈ ವೇದಾಧ್ಯಯನ ತರಬೇತಿ ನೀಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ