ಆ್ಯಪ್ನಗರ

ರಾಮದುರ್ಗ: ಸಿಹಿ ಹಂಚಿ ಸಂಭ್ರಮಾಚರಣೆ

ರಾಮದುರ್ಗ: ಮಹದಾಯಿ ನೀರು ಹಂಚಿಕೆಯ ವಿಷಯದಲ್ಲಿ ನ್ಯಾಯಾಧಿಕರಣ ನೀಡಿದ ತೀರ್ಪನ್ನು ತಾಲೂಕಿನ ಸಮಸ್ತ ರೈತರು ಸ್ವಾಗತಿಸಿ ವಿಜಯೋತ್ಸವ ...

Vijaya Karnataka 15 Aug 2018, 5:00 am
ರಾಮದುರ್ಗ: ಮಹದಾಯಿ ನೀರು ಹಂಚಿಕೆಯ ವಿಷಯದಲ್ಲಿ ನ್ಯಾಯಾಧಿಕರಣ ನೀಡಿದ ತೀರ್ಪನ್ನು ತಾಲೂಕಿನ ಸಮಸ್ತ ರೈತರು ಸ್ವಾಗತಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
Vijaya Karnataka Web BEL-14RD6


ವಿವಿಧ ರೈತಪರ ಸಂಘಟನೆಗಳ ಸದಸ್ಯರು ಹಾಗೂ ರೈತರು ಪಟ್ಟಣದ ಹುತಾತ್ಮ ವೃತ್ತದಲ್ಲಿ ಸೇರಿ ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡರು.

ಇದು ನಮ್ಮ ಹೋರಾಟದ ಮೊದಲ ಜಯ ಎಂದು ಭಾವಿಸುತ್ತೇವೆ. ಮುಂದಿನ ದಿನಗಳಲ್ಲಿ ಉಳಿದ ನೀರನ್ನು ಪಡೆಯುವವರೆಗೂ ನಿರಂತರ ಹೋರಾಟ ಮುಂದುವರಿಯುತ್ತದೆ ಎಂದು 'ಮಹದಾಯಿಗಾಗಿ ಮಹಾವೇದಿಕೆ'ಯ ಮುಖಂಡ ಶಂಕರಗೌಡ ಪಾಟೀಲ ಹೇಳಿದರು.

ರೈತ ಮುಖಂಡರಾದ ವೆಂಕಟೇಶ ಹಿರೇರಡ್ಡಿ, ಆರ್‌.ಸಿ. ಪತ್ತೇಪುರ, ಬಾಳಪ್ಪ ಚುಂಚನೂರ, ಡಿ.ಎಫ್‌.ಹಾಜಿ. ಸಿ.ಎಸ್‌.ಹಿರೇಮಠ, ಬಾಳಪ್ಪ ಹಂಜಿ, ನಿಂಗನಗೌಡ ಪಾಟೀಲ, ಅರ್ಜುನ ಜಾಧವ, ಮಲ್ಲಿಕಾರ್ಜುನ ರಾಮದುರ್ಗ, ಯಲ್ಲಪ್ಪ ದೊಡಮನಿ, ಮಲ್ಲಪ್ಪ ಹಾದಿಮನಿ, ಮುತ್ತು ರಾಯರೆಡ್ಡಿ, ಸಂಗಮೇಶ ಚಿಕ್ಕನರಗುಂದ, ಮಾರುತಿ ಕುಂಬಾರ, ಜಬ್ಬರಸಾಬ ಸೈಯದ್‌, ಮಾಯಪ್ಪ ಒಡೆಕನವರ, ಕರವೇ ಅಧ್ಯಕ್ಷ ದುಂಡಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ