ಆ್ಯಪ್ನಗರ

ಮನೆ ಪರಿಹಾರ ನೀಡಲು ಸಂತ್ರಸ್ತನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಬಂಧನ

ಮೂಡಲಗಿ(ಬೆಳಗಾವಿ): ಅತಿವೃಷ್ಟಿಯಿಂದ ಹಾಳಾದ ಮನೆಗೆ ಪರಿಹಾರ ...

Vijaya Karnataka 1 Dec 2020, 5:00 am
ಮೂಡಲಗಿ(ಬೆಳಗಾವಿ): ಅತಿವೃಷ್ಟಿಯಿಂದ ಹಾಳಾದ ಮನೆಗೆ ಪರಿಹಾರ ನೀಡಲು ಸಂತ್ರಸ್ತರಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 30LBS15_53
ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ


ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಸಿಬಿ ಬಲೆಗೆ ಬಿದ್ದವರು.

ಮನೆ ಕಳೆದುಕೊಂಡ ಸಂತ್ರಸ್ತರ ನೋಂದಣಿ ಕಾರ‍್ಯವನ್ನು ಇಲ್ಲಿನ ತಹಸೀಲ್ದಾರರ ಕಚೇರಿಯಲ್ಲಿಪ್ರಾರಂಭಿಸಲಾಗಿತ್ತು. ತಹಸೀಲ್ದಾರರ ಕಚೇರಿಯಲ್ಲಿಸಿಬ್ಬಂದಿ ಕೊರತೆಯಿಂದ ನೋಂದಣಿ ಮಾಡಲು ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಅವರನ್ನು ನೇಮಿಸಲಾಗಿತ್ತು.

ಅರಬಾವಿ ಗ್ರಾಮದ ತೋಟದ ನಿವಾಸಿ ಆನಂದ ಉದ್ದಪ್ಪ ಧರ್ಮಟ್ಟಿ ಅವರ ಮನೆಯನ್ನು ಹಾನಿ ಸರ್ವೆ ವರದಿಯಲ್ಲಿಸಿ ಗುಂಪಿಗೆ ಸೇರಿಸಲಾಗಿತ್ತು. ಅದನ್ನು ಬಿ ಗುಂಪಿಗೆ ಸೇರಿಸಲು ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಮೊದಲು 40 ಸಾವಿರ ರೂ, ಬೇಡಿಕೆ ಇಟ್ಟಿದ್ದರು. ನಂತರ 30 ಸಾವಿರ ರೂ.ಗೆ ಒಪ್ಪಿಗೆ ಸೂಚಿಸಿದ್ದರು. ಮೊದಲು 15 ಸಾವಿರ ರೂ. ಕೊಡಬೇಕು ನಂತರ ಬಾಕಿ ನೀಡಬೇಕು ಎಂದು ತಿಳಿಸಿದ್ದರು. ಈ ಕುರಿತು ಆನಂದ ಧರ್ಮಟ್ಟಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಸೋಮವಾರ ಮೊದಲ ಕಂತಿನ ಹಣ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಎಸಿಬಿ ಡಿಎಸ್‌ಪಿ ವೇಣುಗೋಪಾಲ, ಅಧಿಕಾರಿಗಳಾದ ಅಡಿವೆಪ್ಪ ಗುದಿಗೊಪ್ಪ, ಸುನಿಲಕುಮಾರ ಮತ್ತು ಸಿಬ್ಬಂದಿ ದಾಳಿಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ