ಆ್ಯಪ್ನಗರ

ನಾನಾ ಕಡೆ ಆಹಾರ ಆಯೋಗದ ಅಧ್ಯಕ್ಷರ ಭೇಟಿ

ಬೈಲಹೊಂಗಲ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾಎನ್‌...

Vijaya Karnataka 19 Feb 2020, 5:00 am
ಬೈಲಹೊಂಗಲ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಹಾಗೂ ತಂಡದ ಸದಸ್ಯರು ತಾಲೂಕಿನ ನಾನಾ ಗ್ರಾಮಗಳ ಶಾಲೆ, ಅಂಗನವಾಡಿ, ಹಾಸ್ಟೆಲ್‌ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web 18HTP7_53
ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಕ್ಕೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಹಾಗೂ ತಂಡದ ಸದಸ್ಯರು ಭೇಟಿ ನೀಡಿದರು.


ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಊಟದ ಮೆನು, ಗುಣಮಟ್ಟ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ನಂತರ ಸಂಪಗಾವಿ, ಬೈಲಹೊಂಗಲ ಪಟ್ಟಣದಲ್ಲಿನ ನ್ಯಾಯಬೆಲೆ ಅಂಗಡಿ, ಆಹಾರ ಗೋದಾಮುಗಳ ಸ್ಥಿತಿಗತಿ, ನಿರ್ವಹಣೆ ವೀಕ್ಷಣೆ ಮಾಡಿದರು. ಮಕ್ಕಳ ಆರೋಗ್ಯ ಬಗ್ಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಅನುಷ್ಠಾನದ ಹಂತಗಳ ಕುರಿತು ಪರಿಶೀಲನೆ ನಡೆಸಿದರು. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲೆಗಳಲ್ಲಿಬಿಸಿಯೂಟದ ಗುಣಮಟ್ಟ, ಹಾಸ್ಟೆಲ್‌ಗಳ ಸ್ಥಿತಿ-ಗತಿಗಳ ಬಗ್ಗೆ ಪರಿಶೀಲಿಸಿದರು.

ಬಿಆರ್‌ಸಿ ಬಿ.ಎನ್‌. ಕಸಾಳೆ, ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಪ್ರಕಾಶ ಮೆಳವಂಕಿ ಹಾಗೂ ರಾಜ್ಯ ಆಹಾರ ಆಯೋಗ ತಂಡದ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ