ಆ್ಯಪ್ನಗರ

ಕಾಡಾಪುರಕ್ಕೆ ಕಲುಶಿತ ನೀರು ಪೂರೈಕೆ: ಅಧಿಕಾರಿ ತರಾಟೆಗೆ

ಚಿಕ್ಕೋಡಿ: ಕಾಡಾಪುರ ಗ್ರಾಮಕ್ಕೆ ಕುಡಿಯಲು ಕಲುಶಿತ ನೀರು ಪೂರೈಸಲಾಗಿದೆ ಎಂದು ಆರೋಪಿಸಿದ ತಾಪಂ ಸದಸ್ಯ ಪ್ರಕಾಶ ...

Vijaya Karnataka 21 Jun 2018, 5:00 am
ಚಿಕ್ಕೋಡಿ: ಕಾಡಾಪುರ ಗ್ರಾಮಕ್ಕೆ ಕುಡಿಯಲು ಕಲುಶಿತ ನೀರು ಪೂರೈಸಲಾಗಿದೆ ಎಂದು ಆರೋಪಿಸಿದ ತಾಪಂ ಸದಸ್ಯ ಪ್ರಕಾಶ ಅಪ್ಪಾಸಾಬ ರಾಚಣ್ಣವರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಅಭಿಯಂತರ ಆನಂದ ಬಣಕಾರ ಅವರನ್ನು ಅವರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
Vijaya Karnataka Web BEL-20CKD-1


ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಾಟಲಿಯೊಂದರಲ್ಲಿ ತುಂಬಿಕೊಂಡು ಬಂದಿದ್ದ ಕಲುಶಿತ ನೀರನ್ನು ಪ್ರದರ್ಶಿಸಿದ ಅವರು, ಕಳೆದ ಹಲವಾರು ದಿನಗಳಿಂದ ಗ್ರಾಮಕ್ಕೆ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಸದಸ್ಯ ಸಮೀರ್‌ ಚೌಶ, ಚಾಂದ ಶಿರದವಾಡ ಗ್ರಾಮದಲ್ಲಿ ಸಹ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಶೇ.70ರಷ್ಟು ಜನರು ಕಿಡ್ನಿ ಸ್ಟೋನ್‌ದಿಂದ ಬಳಲುತ್ತಿದ್ದು ಅಲ್ಲಿ ಗಡಸು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಯ ಗಮನ ಸೆಳೆದರು.

ಪಟ್ಟಣದಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರಿಂದ ಅಲ್ಲಿನ ಸ್ತ್ರೀರೋಗ ತಜ್ಞೆಯೊಬ್ಬರು 5 ಸಾವಿರ ಹಣ ಪಡೆದುಕೊಳ್ಳುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಎಂದು ನೇಜ ಕ್ಷೇತ್ರದ ಸದಸ್ಯ ನಜೀರ್‌ ಅಹ್ಮದ್‌ ದಸ್ತಗೀರ್‌ ಬೇಗ್‌ ತಾಲೂಕು ವೈದ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಅವರನ್ನು ಪ್ರಶ್ನಿಸಿದರು. ಸಾರ್ವಜನಿಕ ಆಸ್ಪತ್ರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದಾಗ್ಯೂ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಾ. ಶಿಂಧೆ ಉತ್ತರಿಸಿದರು.

ಸದಸ್ಯ ರವಿ ಮಿರ್ಜಿ ಹಾಗೂ ರಾಜು ಪಾಟೀಲ ಮಾತನಾಡಿ, ಪ್ರತಿ ಬಾರಿ ತಾಪಂ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಸಮಸ್ಯೆ ಬಗೆ ಹರಿಸದೆ ಜನರ ಬಳಿ ಹೋಗುವುದು ಕಷ್ಟವಾಗಿದೆ. ಇನ್ನು ಮುಂದೆ ಪ್ರತಿ 2 ತಿಂಗಳಿಗೊಮ್ಮೆ ತಾಪಂ ಸಾಮಾನ್ಯ ಸಭೆ ನಡೆಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಮೇಲಾಧಿಕಾರಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಪಾಟೀಲ ಭರವಸೆ ನೀಡಿದರು.

ತಾಪಂ ಅಧ್ಯಕ್ಷೆ ಉರ್ಮಿಳಾ ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾದೇವಿ ನಾಯಿಕ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಪಾಟೀಲ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಮಾತಂಗಕೇರಿಯಲ್ಲಿ ಡೆಂಗೆ ಹಾವಳಿ: ಮಾತಂಗಕೇರಿಯಲ್ಲಿ ಡೆಂಗೆ ಜ್ವರದ ಹಾವಳಿ ಆರಂಭವಾಗಿರುವುದನ್ನು ತಾಲೂಕು ವೈದ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಸಭೆಯ ಗಮನಕ್ಕೆ ತಂದರು. ಈಗಾಗಲೇ ಡೆಂಗೆ ಜ್ವರದಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಅಲ್ಲಿ ಇನ್ನೂ ಮೂವರಿಗೆ ಡೆಂಗೆ ಜ್ವರ ಇರುವುದು ಪತ್ತೆಯಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿಗಾಗಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ