ಆ್ಯಪ್ನಗರ

ಪಂಚಮುಖಿ ಪರಮೇಶ್ವರ ರಥಯಾತ್ರೆಗೆ ಸ್ವಾಗತ

ಅಥಣಿ: ಸರ್ವ ಧರ್ಮ ಸಮಭಾವದ ಸಂದೇಶ ಸಾರುವ ಮೂಲಕ ರಾಜ್ಯದ ಬೀದರ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಸಂಚಾರ ಹೊರಟ ಪಂಚಮುಖಿ ಪರಮೇಶ್ವರ ಯಾತ್ರೆ ರಥವನ್ನು ...

Vijaya Karnataka 17 Sep 2018, 5:00 am
ಅಥಣಿ: ಸರ್ವ ಧರ್ಮ ಸಮಭಾವದ ಸಂದೇಶ ಸಾರುವ ಮೂಲಕ ರಾಜ್ಯದ ಬೀದರ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಸಂಚಾರ ಹೊರಟ ಪಂಚಮುಖಿ ಪರಮೇಶ್ವರ ಯಾತ್ರೆ ರಥವನ್ನು ಅಥಣಿಯಲ್ಲಿ ಭಕ್ತಿ ಪೂರ್ವವಾಗಿ ಸ್ವಾಗತಿಸಲಾಯಿತು.
Vijaya Karnataka Web BEL-16 ATHANI-01


ಶಿಕ್ಷ ಕರು ಮತ್ತು ಸಾರ್ವಜನಿಕರು ಆಗಮಿಸಿ ಪಂಚಲೋಹದ ಪಂಚಮುಖಿ ಪರಮೇಶ್ವರ ಬೃಹತ್‌ ಮೂರ್ತಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಯಾತ್ರೆಯಲ್ಲಿ ಭಾಗವಹಿಸಿದ್ದ ನಿವೃತ್ತ ಬಿಇಓ ಬಿ.ಎಂ ಹೊನ್ನಕಸ್ತೂರಿ ಪತ್ರಿಕೆಯೊಂದಿಗೆ ಮಾತನಾಡಿ ಈ ರಥಯಾತ್ರೆ ಹೊರಟು ಮೂರು ತಿಂಗಳಾಗಿದೆ. ಈಗಾಗಲೇ ಪಂಚ ಜ್ಯೋತಿರ್ಲಿಂಗಗಳನ್ನು ಸುತ್ತಿ ಬರಲಾಗಿದೆ. ಈಗ ದೇಶ ಸಂಚಾರ ಹೊರಟಿದ್ದು, ಸರ್ವ ಧರ್ಮ ಸಂದೇಶವನ್ನು ದೇಶದ ಜನತೆ ಸಾರುವ ಮೂಲಕ ಧಾರ್ಮಿಕ ನೆಲೆಗಟ್ಟಿನಲ್ಲಿ ದೇಶಕಟ್ಟುವ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ. ಈ ರಥ ಯಾತ್ರೆ ದೇಶದ ವಿವಿಧ ಭಾಗಗಳಲ್ಲಿ ನಡೆದು ಜಮ್ಮು ಕಾಶ್ಮಿರದ ಅಮರನಾಥ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ